nil
ಸಂಗೊಳ್ಳಿ ರಾಯಣ್ಣ ಕಿತ್ತೂರು ರಾಣಿ ಚೆನ್ನಮ್ಮಳ ಮೈಗಾವಲು ಪಡೆಯ ವಿಶ್ವಾಸಿಕ ನಾಯಕ. ಕಿತ್ತೂರು ಸಂಸ್ಥಾನವನ್ನು ಕಬಳಿಸಲು ಉದ್ದೇಶಿಸಿದ ಬ್ರಿಟಿಷರ ವಿರುದ್ಧ ಸಿಡಿದೆದ್ದವನು. ಕಿತ್ತೂರು ಆಂಗ್ಲರ ವಶವಾದ ನಂತರವೂ ಅವನು ಸರದಾರ ಅವರಾದಿ ವೀರಪ್ಪನವರ ಜೊತೆ ಕೂಡಿಕೊಂಡು ಸುರಪುರ, ಶಿವಗುತ್ತಿ ಮೊದಲಾದ ಸಂಸ್ಥಾನಗಳ ಸಹಾಯ ಪಡೆದದ್ದಲ್ಲದೆ ಅನೇಕ ಜನ ದರೋಡೆಕೋರರ ಮನಸ್ಸುಗಳನ್ನು ಒಲಿಸಿಕೊಂಡು ಅವರ ಸಹಾಯದಿಂದ ಆರು ಸಾವಿರ ಯೋಧರ ಪಡೆಯೊಂದನ್ನು ಸಂಘಟಿಸುತ್ತಾನೆ. ಆದರೆ ನೇಗಿನಹಾಳ ಮತ್ತು ಬೊದಾನಪುರದ ಗೌಡರು ಮೋಸ ಮಾಡಿ ಸೆರೆ ಹಿಡಿದು ಅವನನ್ನು ಬ್ರಿಟಿಷರಿಗೆ ಒಪ್ಪಿಸುತ್ತಾರೆ. ಅವರು ಅವನನ್ನು ನಂದಗಡದ ಬಯಲಿನಲ್ಲಿ ನೇಣುಗಂಬಕ್ಕೆ ಏರಿಸುತ್ತಾರೆ.
ಎಲ್ ರಾಘವೇಂದ್ರ
#
Showing 1261 to 1290 of 5270 results