nil
#
ನಿಮ್ಮ ನಾಲಿಗೆ ಬಯಸುವ ಚಾಕೋಲೆಟೊಂದು ಸಲೀಸಾಗಿ ನಿಮ್ಮನ್ನು ತಲುಪುವಂತೆ, ನಿಮ್ಮ ಬುದ್ದಿ ಇಷ್ಟಪಡುವ ಪುಸ್ತಕವೊಂದು ನಿಮ್ಮ ಗೂಡಿಗೆ ತಲುಪಿಸಲು ಹರಸಾಹಸ ಪಡಬೇಕಾದ ಸ್ಥಿತಿ ಕನ್ನಡದಲ್ಲಿದೆ. ಅದನ್ನು ಮನಗಂಡು ನೀವು ಇರುವಲ್ಲೇ, ನೀವು ಇಷ್ಟ ಪಡುವ ಪುಸ್ತಕಗಳನ್ನು ನಿಮಗೆ ತಲುಪಿಸುವ ಜವಾಬ್ದಾರಿ ಇನ್ಮುಂದೆ 'ವೀರಲೋಕ ಬುಕ್ಸ್' ಹೊರಲಿದೆ. ನಿಶ್ಚಿಂತೆಯಿಂದ ಓದುವ ಸುಖ ನಿಮ್ಮದಾಗಲಿ. ಯುವ ಜನತೆ ಪುಸ್ತಕ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ ಎನ್ನುವುದು ಎಷ್ಟು ಸತ್ಯವೋ, ಅವರನ್ನು ಓದಿಸಬೇಕಾದ ಜವಾಬ್ದಾರಿ ಕೂಡ ನಮ್ಮದು ಎನ್ನುವುದು ಅಷ್ಟೇ ಸತ್ಯ. ಅವರಿಗೆ ಓದಿನ ರುಚಿ ಹೆಚ್ಚಿ, ಪುಸ್ತಕಗಳ ಮಹತ್ವ ತಿಳಿಸುವ ಉದ್ದೇಶ ವೀರಲೋಕ ಬುಕ್ಸ್ ಹಿಂದಿದೆ. ಪ್ರಾಮೀಸ್, ನಾವು ರಾಜ್ಯದ ಕಟ್ಟಕಡೆಯ ಓದುಗನಿಗೆ ಪುಸ್ತಕ ತಲುಪಿಸುವ ಬಹು ದೊಡ್ಡನೆಟ್ ವರ್ಕ್ ಹೊಂದಿದ್ದೇವೆ. ನಿಮ್ಮೂರು ಯಾವುದೇ ಆಗಿರಲಿ, ಅಲ್ಲಿಗೆ ಪುಸ್ತಕ ಮುಟ್ಟಿಸುತ್ತೇವೆ. ಈ ಕಾರ್ಯದಲ್ಲಿ ನಮ್ಮ ಬೆನ್ನಹಿಂದೆ ಈ ನಾಡಿನ ಅಸಂಖ್ಯಾತ ಲೇಖಕರ ಬಳಗವೇ ಇದೆ. ನಮ್ಮದು ಉದ್ಯಮವಲ್ಲ. ಇದೊಂದು ಅಕ್ಷರ ಕ್ರಾಂತಿ ಹಂಚುವ ಕಾಯಕ. ಸದಭಿರುಚಿ ಪುಸ್ತಕಗಳ ತಲುಪಿಸುವ ಅಭಿಯಾನ. ಈ ಕೆಲಸದಲ್ಲಿ ನಮ್ಮೊಂದಿಗೆ ನೀವೂ ಕೈಜೋಡಿಸಿ. ಹೆಚ್ಚಿನ ಮಾಹಿತಿ ಮತ್ತು ನಮ್ಮ ಉದ್ದೇಶವನ್ನು ಇತರರಿಗೆ ತಲುಪಿಸಲು ವೀರಲೋಕ ಬುಕ್ಸ್ ಕಾಮ್ ಗೆ ಭೇಟಿ ನೀಡಿ. ಪುಸ್ತಕ ಖರೀದಿಸಿ, ಕೊಂಡುಕೊಳ್ಳುವಂತೆ ಪ್ರೋತ್ಸಾಹಿಸಿ.
ಸಮಲೈಂಗಿಕತೆ ಎಂದರೇನು? ನಮ್ಮ ಧರ್ಮಗಳು ಇದನ್ನು ಕುರಿತು ಏನು ಹೇಳುತ್ತವೆ? ಹಿಂದೂ ಪೌರಾಣಿಕ ಧರ್ಮ ಗ್ರಂಥಗಳು, ಇಸ್ಲಾಂ, ಜೈನ ಹಾಗೂ ಬೌದ್ಧ ಧರ್ಮಗಳು ಸಾಮಾಜಿಕವಾಗಿ ಈ ಬಗ್ಗೆ ಏನನ್ನು ಹೇಳುತ್ತವೆ? ಆಧುನಿಕ ದೃಷ್ಟಿಕೋನದಿಂದಲೂ, ಪೌರಾಣಿಕ ಸಾಹಿತ್ಯದ ವೈವಿಧ್ಯಮಯ ವಿಶ್ಲೇಷಣೆಯ ಮೂಲಕವೂ, ಪ್ರಖ್ಯಾತ ಚಿಂತಕರಾದ ದೇವದತ್ತ ಪಟ್ಟನಾಯಕ ಸಮಲೈಂಗಿಕತೆ ಕುರಿತಾದ ಆಳವಾದ ಚರ್ಚೆಯನ್ನು ಈ ಕೃತಿಯಲ್ಲಿ ಮಂಡಿಸಿದ್ದಾರೆ. ಪೌರಾಣಿಕ ದಂತಕಥೆಗಳು, ಶಿಲ್ಪಕಲಾ ಪರಂಪರೆ, ಪುರಾತನ ಗ್ರಂಥಗಳು, ಹೀಗಾಗಿ ವಿವಿಧ ಸಂಸ್ಕೃತಿಗಳ ಪಾರದರ್ಶಕ ಅಧ್ಯಯನ ಈ ಕೃತಿಯ ವೈಶಿಷ್ಟ್ಯವಾಗಿದೆ. ಇದು ಧರ್ಮ ಮತ್ತು ಸಮಲೈಂಗಿಕತೆ ನಡುವಿನ ಸಂಬಂಧದ ಕುರಿತಾದ ಅನ್ವೇಷಣೆ, ಪುರಾಣಗಳು ಮತ್ತು ಸಮಾಜದ ನಡುವಿನ ಸಂವಾದ. ಪ್ರಗತಿಶೀಲ ಯೋಗ್ಯತೆ ಮತ್ತು ಮಾನವೀಯತೆಗೆ ಒಲವು ಇರುವ ಪ್ರತಿಯೊಬ್ಬರಿಗೂ ಈ ಕೃತಿ ಓದಲು ತಕ್ಕದ್ದು.
Showing 2191 to 2220 of 5270 results