`ನಮ್ಮ ದೇಹದ ವಿಜ್ಞಾನ` ಎಂಬುದೇ ವಿಸ್ಮಯಕಾರಿ ಪರಿಕಲ್ಪನೆ, ಮಾನವನ ದೇಹವನ್ನು ಬಿಡಿ ಬಿಡಿಯಾಗಿ ಈ ಕೃಷಿಯಲ್ಲಿ ಪರಿಚಯ ಮಾಡಿಕೊಡಲಾಗಿದೆ. ನಮ್ಮ ದೇಹದ ಬಗ್ಗೆ ಹಾಗೂ ಅದರಲ್ಲಿ ಹೊಂದಾಣಿಕೆಯಿಂದಿರುವ ವಿವಿಧ ಅಂಗಾಂಗಗಳ ರಚನೆ ಮತ್ತು ಕಾರ್ಯ ವಿಧಾನಗಳ ಬಗ್ಗೆ ಅನೇಕ ಪುಸ್ತಕಗಳು ಲಭ್ಯವಿದೆ. ಆದರೆ ನಮ್ಮ ದೇಹದಲ್ಲಿ ಅಡಕವಾಗಿರುವ ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ ಹಾಗೂ ಎಂಜಿನಿಯರಿಂಗ್ ಅಂಶಗಳನ್ನು ಇಲ್ಲಿ ಹಕ್ಕಿ ಹೆಕ್ಕಿ ತೆಗೆದು ಪರಿಚಯಿಸಿರುವ ಪರಿ ಅನನ್ಯ; ಕನ್ನಡದಲ್ಲಿ ಇದು ಒಂದು ಹೊಸ ಪ್ರಯೋಗ, ಇಲ್ಲಿ ನಿರೂಪಿಸಿರುವ ದಾಟಿ ವಿದ್ಯಾರ್ಥಿ ಮತ್ತು ಅಧ್ಯಾಪಕರನ್ನಷ್ಟೇ ಅಲ್ಲ, ಜನ ಸಾಮಾನ್ಯರನ್ನೂ ಓದಲು ಪ್ರೇರೇಪಿಸುತ್ತದೆ. ಇದೊಂದು `ದೇಹದ ಜ್ಞಾನಕೋಶ`. ಇಲ್ಲಿನ ಭಾಷೆ ಸರಳ, ಓದು ಸರಾಗ ಬಹುವರ್ಣದಲ್ಲಿ ಪ್ರಕಟವಾಗಿರುವುದು ಸಂಪುಟದ ಆಕರ್ಷಣೆಯನ್ನು ಹೆಚ್ಚಿಸಿದೆ. ನಮ್ಮ ದೇಹವು ಹೋಲಿಕೆಯಲ್ಲಿ ಮಾನವನಿರ್ಮಿತ ಯಾವುದೇ ಯಂತ್ರಕ್ಕೆ ಸೆಡ್ಡು ಹೊಡೆಯಬಲ್ಲದು ಎಂಬ ವಾಸ್ತವಾಂಶವನ್ನು ಸಂಪುಟದುದ್ದಕ್ಕೂ ನಿದರ್ಶನಗಳೊಡನೆ ವಿವರಿಸಲಾಗಿದೆ. ಪ್ರಥಮಾರ್ಧದಲ್ಲಿ ನಮ್ಮ ದೇಹದ ವಿವಿಧ ಅಂಗಗಳ ಸಮಗ್ರ ಪರಿಚಯವನ್ನು ಎಳೆಎಳೆಯಾಗಿ ದಾಖಲಿಸಲಾಗಿದೆ. ಅಂಗಾಂಗಗಳ ರಚನೆ, ಅವುಗಳ ಕ್ರಿಯಾಶೀಲತೆ ಹಾಗೂ ದೇಹದಲ್ಲಿ ಅವುಗಳ ಪಾತ್ರವನ್ನು ಅಚ್ಚುಕಟ್ಟಾಗಿ ಚಿತ್ರಿಸಲಾಗಿದೆ. ಈ ವಿಭಾಗ ಸಂಪೂರ್ಣವಾಗಿ ವೈದ್ಯರ ಲೇಖನಿಯಿಂದಲೇ ಮೂಡಿಬಂದಿರುವುದು ವಿಶೇಷ. ದ್ವಿತೀಯಾರ್ಧದಲ್ಲಿ ವಿವಿಧ ಅಂಗಾಂಗಗಳ ಕಾರ್ಯಾಚರಣೆಯಲ್ಲಿ ಅಡಗಿರುವ ವಿಜ್ಞಾನದ ಬೇರೆ ಬೇರೆ ತತ್ತ್ವಗಳನ್ನು ಮನಮುಟ್ಟುವ ಹಾಗೆ ಮತ್ತು ಸುಲಭವಾಗಿ ಗ್ರಹಿಸಲು ಅನುವಾಗುವಂತೆ ಬಿಂಬಿಸಲಾಗಿದೆ. ದೇಹದ ಸಮತೋಲವನ್ನು ಕಾಪಾಡುವ ಗುರುತ್ವ, ಚಲನೆ ಹಾಗೂ ನಡೆದಾಡುವುದನ್ನು ಭೌತವಿಜ್ಞಾನದ ಹಿನ್ನೆಲೆಯಲ್ಲೂ, ರಕ್ತಪರಿಚಲನೆಯನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗೂ ಹೋಲಿಸಿರುವುದು ನಿರೂಪಣೆಗೊಂದು ಉದಾಹರಣೆ. ಕೃತಿಯ ಸರಳ ಕಿವಿಯಲ್ಲಿ ಶಬ್ದವಿಜ್ಞಾನವೂ ಇದೆ. ಮೆಕ್ಯಾನಿಕ್ಸ್ ಕೂಡ ಇದೆ. ಕಣ್ಣನ್ನು ಕ್ಯಾಮೆರಾಕ್ಕೆ ಹೋಲಿಸಿರುವುದರಲ್ಲಿ ಅರ್ಥವಿದೆ, ಇಡೀ ದೇಹವೇ ಒಂದು ರಾಸಾಯನಿಕ ಕಾರ್ಖಾನೆ. ಕ್ಷಣಕ್ಷಣಕ್ಕೂ ಸಹಸ್ರಾರು ರಾಸಾಯನಿಕ ಕ್ರಿಯೆಗಳು ಜರಗುತ್ತಿದ್ದರೂ ಅವು ನಮ್ಮ ಅರಿವಿಗೆ ಬರುವುದಿಲ್ಲ. ಜೀನ್ಸ್ಗಳಲ್ಲಿ ಅಡಕವಾಗಿರುವ ಗುಪ್ತ ಕೋಡುಗಳು ಮತ್ತು ಡಿಕೋಡಿಂಗ್ ಕಗ್ಗಂಟು ಬಿಡಿಸುವ ಇಲ್ಲಿನ ವಿವರಣೆ ಓದುಗರಿಗೆ ಅದ್ಭುತ ಲೋಕವನ್ನೇ ಅನಾವರಣ ಮಾಡುತ್ತದೆ. ಮಿದುಳನ್ನು ಯಾವ ಗಣಕಯಂತ್ರಕ್ಕೂ ಹೋಲಿಸಲಾಗದು. ಅದೇ ಒಂದು ಸೂಪರ್ ಕಂಪ್ಯೂಟರ್, ಮುಖದಲ್ಲಿ ಸ್ವರ್ಣಾನುಪಾತದ ಸೂತ್ರವಿದೆ. ಎಲ್ಲವೂ ಗಣಿತದ ಲೆಕ್ಕಾಚಾರದಂತೆಯೇ ಇದೆ.
nil
#
ನಮ್ಮವರ VRS ಮತ್ತು ಇತರ ಹಾಸ್ಯ ಲೇಖನಗಳು
ಕವಿತೆಗೆ ಓದುಗರೇ ಇಲ್ಲವೆನ್ನುವವರ ಮುಂದೆ ಇಲ್ಲಿನ ಕವಿತೆಗಳನ್ನು ನಿಲ್ಲಿಸಬೇಕು. ಯಾಕೆಂದರೆ ಅಬ್ದುಲ್ ರಶೀದ್ ಅವರ ಕವಿತೆಗಳನ್ನು ಓದುವುದೇ ಒಂದು ಪರಮಸುಖ. ಅಷ್ಟು ತೀಕ್ಷ್ಮವಾದ ವೇಗ ಇಲ್ಲಿನ ಕವಿತೆಗಳಿಗಿವೆ. ಇಲ್ಲಿನ ಕವಿತೆಗಳು ಓದುಗನೊಳಗೆ ಹುದುಗಿರುವ ಕವಿಯನ್ನು ಬಡಿದೆಬ್ಬಿಸುವುದಂತು ನಿಜ!
Showing 2251 to 2280 of 5127 results