nil
ರಾಜಿರಹಿತ ಮನೋಭಾವದಲ್ಲಿ ಅಪಾರ ಆಶಾವಾದ, ಜೀವನೋತ್ಸಾಹ, ಆದರ್ಶವಾದಿ ನೆಲೆಯಲ್ಲಿ ಬರೆದ ಬರಹಗಳಿವು. ಲೇಖಕರು ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ 2006ರ ಇಸವಿಯ ಸ೦ದರ್ಭದಲ್ಲಿ ಕರ್ನಾಟಕದಲ್ಲಿ ಆರಂಭಿಸಿದ "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಗೆ ಬರೆದ ಈ ಸಂಪುಟ-1 ಪುಸ್ತಕದಲ್ಲಿಯ ಲೇಖನಗಳಲ್ಲಿ ಕರ್ನಾಟಕ, ಭಾರತ, ಅಮೆರಿಕದ ತನಕ ವ್ಯಾಪಿಸಿಕೊಂಡ ರಾಜಕಾರಣವಿದೆ, ಸಾಮಾಜಿಕ ಸಂದರ್ಭಗಳ ವಿಶ್ಲೇಷಣೆ ಇದೆ, ಜನಬದುಕಿನ ಮೇಲೆ ವಿಜ್ಞಾನ-ತಂತ್ರಜ್ಞಾನಗಳ ನೂತನ ಆವಿಷ್ಕಾರ ಮತ್ತು ಅನ್ವಯಗಳ ಹಲವು ವಿವರಗಳಿವೆ, ಸಾಹಿತ್ಯ, ಸಿನಿಮಾ, ಕ್ರೀಡಾ ಸಂಬಂಧಿ ಲೇಖನಗಳಿವೆ. ಸ್ಥಳೀಯ ಮತ್ತು ಜಾಗತಿಕ ಆರ್ಥಿಕ ವಿದ್ಯಮಾನಗಳೂ ಚರ್ಚಿಸಲ್ಪಟ್ಟಿವೆ. ಪ್ರಜಾಪ್ರಭುತ್ವ ಮತ್ತು ಸಂವಾದದ ಮಹತ್ವವನ್ನು ಒಮ್ಮೊಮ್ಮೆ suttle ಆಗಿ, ಒಮ್ಮೊಮ್ಮೆ ಗಟ್ಟಿಯಾಗಿ ಹೇಳಲಾಗಿದೆ. ಹಲವು ವ್ಯಕ್ತಿಚಿತ್ರಗಳ ಮೂಲಕ ಸಾರ್ವತ್ರಿಕ ಮೌಲ್ಯಗಳನ್ನು ಮತ್ತು ಆದರ್ಶಗಳನ್ನು ಪ್ರತಿಪಾದಿಸಲಾಗಿದೆ.
“ಅಮೋಘವರ್ಷ” ಇದೊಂದು ಸಂಶೋಧನಾತ್ಮಕ ಐತಿಹಾಸಿಕ ಕಾದಂಬರಿ. ಒಂಭತ್ತನೆಯ ಶತಮಾನದಲ್ಲಿ ಮಾನ್ಯಖೇಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ರಾಷ್ಟ್ರಕೂಟ ದೊರೆ ಅಮೋಘವರ್ಷ ಬಿರುದಾಂಕಿತ ನೃಪತುಂಗ, ಮಗಧದ ಸಾಮ್ರಾಟ ಅಶೋಕನಂತೆ ಶಾಂತಿ ಮಾರ್ಗದಲ್ಲಿಯೇ ವಿಸ್ತಾರವಾದ ರಾಜ್ಯವನ್ನು ಆಳಿದವನು. ಅಶೋಕ ಬೌದ್ಧಧರ್ಮವನ್ನು ಅವಲಂಬಿಸಿದರೆ ನೃಪತುಂಗ ಜೈನಧರ್ಮವನ್ನು ಅವಲಂಬಿಸಿದವನು. ಅಮೋಘವರ್ಷ” ಕಾದಂಬರಿ ರಾಷ್ಟ್ರಕೂಟರ ಕುರಿತು ಪೂರ್ಣ ಪ್ರಮಾಣದಲ್ಲಿ ಅರಿತುಕೊಳ್ಳುವುದಕ್ಕೆ ಸಹಾಯಕಾರಿಯಾಗಲಿದೆ. ಲೇಖಕರಾದ ಲಕ್ಷ್ಮಣ ಕೌಂಟೆ ಅವರು ಹಲವು ಗ್ರಂಥಗಳನ್ನು ಅಧ್ಯಯನ ಮಾಡಿ ಈ ಕೃತಿಯನ್ನು ರಚಿಸಿದ್ದು ರಾಷ್ಟ್ರಕೂಟರ ಕುರಿತು ಇದುವರೆಗೂ ಪ್ರಕಟವಾದ ಎಲ್ಲ ಕಾದಂಬರಿಗಳಿಗಿಂತಲೂ ಭಿನ್ನವೂ ವಿಶಿಷ್ಠವೂ ಆಗಿದೆ.
“ಅಮೋಘವರ್ಷ” ಇದೊಂದು ಸಂಶೋಧನಾತ್ಮಕ ಐತಿಹಾಸಿಕ ಕಾದಂಬರಿ. ಒಂಭತ್ತನೆಯ ಶತಮಾನದಲ್ಲಿ ಮಾನ್ಯಖೇಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ರಾಷ್ಟ್ರಕೂಟ ದೊರೆ ಅಮೋಘವರ್ಷ ಬಿರುದಾಂಕಿತ ನೃಪತುಂಗ, ಮಗಧದ ಸಾಮ್ರಾಟ ಅಶೋಕನಂತೆ ಶಾಂತಿ ಮಾರ್ಗದಲ್ಲಿಯೇ ವಿಸ್ತಾರವಾದ ರಾಜ್ಯವನ್ನು ಆಳಿದವನು. ಅಶೋಕ ಬೌದ್ಧಧರ್ಮವನ್ನು ಅವಲಂಬಿಸಿದರೆ ನೃಪತುಂಗ ಜೈನಧರ್ಮವನ್ನು ಅವಲಂಬಿಸಿದವನು.
#
Showing 241 to 270 of 5244 results