• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ಅಗೆಲು | Agelu

ಎನ್.ಸಿ. ಮಹೇಶ್ರವರ ಮೂರನೆಯ ಕಥಾಸಂಕಲನ ಅಗೆಲು. ಪ್ರಾರಂಭದ ಕಥೆಗಳ ಆಕ್ರೋಶವನ್ನು ಕಳೆದುಕೊಂಡು ಬದುಕನ್ನು ಸಾವಧಾನದಿಂದ ನೋಡುವ ಮನಸ್ಥಿತಿಯನ್ನು ರೂಢಿಸಿಕೊಂಡಿರುವ ಬಗೆ ಈ ಕಥೆಗಳಲ್ಲಿ ನಿಚ್ಚಳವಾಗಿ ಕಾಣಬರುತ್ತದೆ. ಇವರ ಹಲವಾರು ಕತೆಗಳು ಪ್ರಜಾವಾಣಿ, ಬುಕ್‌ ಬ್ರಹ್ಮ, ಮಯೂರ, ಅಕ್ಷರ ಸಂಗಾತ ಮುಂತಾದ ಕನ್ನಡದ ಪ್ರಮುಖ ಸಾಹಿತ್ಯ ಸ್ಪರ್ಧೆಗಳಲ್ಲಿ ಪುರಸ್ಕಾರಕ್ಕೆ ಪಾತ್ರವಾಗಿರುವಂತದ್ದು. ಇಲ್ಲಿನ ಬಹುಪಾಲು ಕಥೆಗಳು ಪ್ರಸ್ತುತ ಸಂದರ್ಭದ ಹಲವಾರು ವಿಚಾರಗಳಿಗೆ ಮುಖಾಮುಖಿಯಾಗುತ್ತವೆ. ಅದನ್ನು ಲೇಖಕ ಕಂಡಿರಿಸಿರುವ ಕ್ರಮ ಅತ್ಯಂತ ಪ್ರಾಮಾಣಿಕವಾಗಿದೆ. ಶಿಕ್ಷಣ ರಂಗದಲ್ಲಿರುವ ದಂಧೆ, ಒಂದು ವರ್ಗವನ್ನು ಹತ್ತಿಕ್ಕಲಾಗದೆ ತತ್ತರಿಸುತ್ತಿರುವ ಮತ್ತೊಂದು ವರ್ಗದವರ ಹಪಾಹಪಿ, ಸ್ತ್ರೀವಾದ, ದೈವದ ಕುರಿತ ನಂಬಿಕೆ, ಕೋಮುವಾದದ ಸ್ವರೂಪ, ಸಂವಿಧಾನ ಇಂದು ಹಲವರ ಮನಸ್ಸಿನಲ್ಲಿ ಅರಳಿಕೊಳ್ಳುತ್ತಿರುವ ಬಗೆ ಇಲ್ಲಿನ ಕಥೆಗಳ ವಸ್ತುವಾಗಿದೆ. "ವರ್ತಮಾನದಲ್ಲಿನ ಮಾಗುವಿಕೆಯ ಪ್ರಜ್ಞೆ ಕೂಡಾ ಅಂತಿಮವಾದುದಲ್ಲ" ಎಂಬ ಅರಿವಿನ ಎಚ್ಚರದಲ್ಲಿ ಬರೆಯುವ ಮಹೇಶ್ ಕನ್ನಡದ ಭರವಸೆಯ ಕತೆಗಾರ,

₹195   ₹174

ಅಣು | Anu

nil

₹120   ₹107

ಅಂತರಂಗದ ಸ್ವಗತ | Antarangada swagata

ಒಂದು ಕಾಲಘಟ್ಟದ ಐತಿಹಾಸಿಕ ಘಟನೆಗಳು. ಸಾಂಸ್ಕೃತಿಕ ಸಂಗತಿಗಳು. ಅಂಥ ಘಟನೆಗಳಿಗೆ ಲೇಖಕರ ಪ್ರತಿಕ್ರಿಯೆಗಳು ಮತ್ತು ಬರೆಯುವ ಕಾಲದಲ್ಲಿ ಉಂಟಾದ ಪಲ್ಲಟಗಳ ತೌಲನಿಕ ಚಿಂತನೆಗಳೂ ಆತ್ಮಕಥನದಲ್ಲಿ ಮುಖ್ಯವಾಗುತ್ತವೆ. ಈ ರೀತಿಯ ದಾಖಲೆಗಳು ಮುಂದಿನ ತಲೆಮಾರಿನ ಓದುಗರಿಗೆ ಒಂದು ಕೊಡುಗೆಯಾಗುತ್ತವೆ. ಹೇಳುವ ರೀತಿಯಲ್ಲಿ ಅಥವಾ ರಚನಾ ತಂತ್ರಗಳಲ್ಲಿ ಲೇಖಕರಿಂದ ಲೇಖಕರಿಗೆ ವ್ಯತ್ಯಾಸವಾಗುತ್ತ ಹೋಗಬಹುದು. ಆದರೆ ಮೂಲತತ್ವ ಎಲ್ಲದಕ್ಕೂ ಒಂದೇ. ಯಶಸ್ಸಿನ ಹಾದಿಯಲ್ಲಿ ಎದುರಿಸಿದ ಕಷ್ಟಗಳಿರಬಹುದು. ಪಡೆದ ಯಶಸ್ಸಿನ ಫಲವಾಗಿ ಸವಿದ ಸಂತೋಷದ ಕ್ಷಣಗಳಿರಬಹುದು. ಏನಿದ್ದರೂ ಹೇಳುವ ವಿಷಯಗಳು ಓದುಗರಿಗೆ ಸ್ಫೂರ್ತಿದಾಯಕವಾಗಿರಬೇಕು, ಮುಂದಿನ ತಲೆಮಾರಿನ ಮಂದಿಗೆ ಪ್ರೇರಣೆ ನೀಡುವಂತಿರಬೇಕು ಅನ್ನುವುದರಲ್ಲಿ ಎರಡು ಮಾತಿಲ್ಲ. ಆತ್ಮಕಥನದಲ್ಲಿ ಕಲ್ಪನೆಯ ಕಟ್ಟು ಕಥೆಗಳಿಗೆ ಅವಕಾಶವಿಲ್ಲ. ವಾಸ್ತವದಲ್ಲಿ ಏನು ನಡೆಯಿತು ಅನ್ನುವುದಷ್ಟೇ ಇಲ್ಲಿ ಮುಖ್ಯ. ಉದ್ಯೋಗ, ಗೃಹಕೃತ್ಯ, ಸಂಸಾರ ನಿರ್ವಹಣೆಯ ಹೊಣೆಗಳ ನಡುವೆಯೂ ಬರಹಗಾರ್ತಿಯಾಗಿ ಓರ್ವ ಮಹಿಳೆ ಯಶಸ್ವಿಯಾಗಬಲ್ಲಳು ಎಂಬುದಕ್ಕೆ 'ಅಂತರಂಗದ ಸ್ವಗತ' ಕೃತಿಯೇ ಸಾಕ್ಷಿ.

₹195   ₹174

ಅತಿಮಾನುಷ | Atimaanusha

ತಾನೊಬ್ಬ ಆಗೋಸ್ಟಿಕ್. ಹಾಗೆಂದುಕೊಂಡ ಪರ್ವನ ಮನಸು ಗೊಂದಲದ ಗೂಡು. ಆಜೇಯತಾವಾದಿ ಎನ್ನುತ್ತಾರಂತೆ ಕನ್ನಡದಲ್ಲಿ ದೇವರಲ್ಲಿ ಅತಿಯಾಗಿ ವಿಶ್ವಾಸವಿರದ, ನಾಸ್ತಿಕತೆಯನ್ನೂ ಒಪ್ಪದ ಮನಸ್ಥಿತಿ ತನ್ನದು. ದೇವರು ಇರಲಿ, ಇರದಿರಲಿ ತನ್ನ ಬದುಕಿಗೆ ವ್ಯತ್ಯಾಸವೇನೂ ಆಗದು ಎನ್ನುವ ತರ್ಕ. ಅವನಿದ್ದರೆ ಅವನ ಪಾಡಿಗಿರಲಿ, ನಾನು ನನ್ನ ಪಾಡಿಗೆ ಎಂದುಕೊಂಡವನ ಬದುಕಲ್ಲಿ ಏನು ನಡೆಯುತ್ತಿದೆ ಎನ್ನುವುದು ಅರ್ಥವಾಗದ ಸ್ಥಿತಿ ಅವನಿಗೆ. ಪರಮ ಆಸ್ತಿಕರಾದ ಹೆತ್ತವರು ತನ್ನ ತರ್ಕವನ್ನು ಅಲ್ಲಗಳೆಯುತ್ತಿದ್ದಾರೆ. ಗೆಳೆಯನಿಗೆ ವಿಷಯದ ಗಂಭೀರತೆಯನ್ನು ವಿವರಿಸುವುದು ಕಷ್ಟ. ಚಿಕ್ಕಪ್ಪನಿಗೆ ವಿವರಿಸಿ ಅರ್ಥ ಮಾಡಿಸೋಣ ವೆಂದರೆ ಅವನಿನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ. ಎಲ್ಲಕ್ಕಿಂತ ಅಚ್ಚರಿಯೆಂದರೆ ಸ್ಮಶಾನದಲ್ಲಿ ಕೊನೆಯವರೆಗೂ ತನ್ನ ಜೊತೆಗೇ ಇದ್ದ ಹೆಂಡತಿಗೆ ಏನೆಂದರೇ ಏನೂ ನೆನಪಿಲ್ಲ. ಆಕೆ ಕೂಡ ಲೋಕಿಯ ಸಾವು ಸಹಜ ಸಾವು ಎನ್ನುತ್ತಾಳೆ. ಅವನ ಸಾವಿಗೆ ಮಾನಸಿಕ ಕಾಯಿಲೆಯೇ ಕಾರಣ ಎಂದು ವಾದಿಸುತ್ತಾಳೆ. ಊಹುಂ..!! ಖಂಡಿತ ಇಲ್ಲ, ಅದು ಸಹಜ ಸಾವಲ್ಲ. ಮೇಲ್ನೋಟಕ್ಕೆ ಸಹವೆನ್ನಿಸಿದರೂ ಅಲ್ಲೊಂದಿಷ್ಟು ಅನುಮಾನಗಳಿಗೆ ಅವಕಾಶವಿದೆ. ಅಲ್ಲೊಂದು ವಿಲಕ್ಷಣತೆಯಿದೆ. ಯಾರ ಗಮನಕ್ಕೂ ಬಾರದ, ಒಂದೇನೋ ಅವ್ಯಕ್ತ ಅಸಹಜತೆಯಿದೆ. ಅದು ನಿಗೂಢ..!! ಅದು ವಿಕ್ಷಿಪ್ತ...!! ಅದು ಮನುಷ್ಯ ಸಹಜವಾದ ಸಾವಲ್ಲ, ಅದು ಅತಿಮಾನುಷ....!! ISBN

₹250   ₹223

ಆ ರಹಸ್ಯ ಕಾಪಾಲಿಕ ಮಠ|Aa Rahasya Kapalika Mata

ಅನೇಕರು ನನ್ನಲ್ಲಿ ಭೂತ-ಪ್ರೇತ, ಪಿಶಾಚಿಗಳನ್ನು ಒಲಿಸಿಕೊಳ್ಳುವುದು ಹೇಗೆ? ಎಂದು ಕೇಳುತ್ತಾರೆ. ತಂತ್ರ-ಮಂತ್ರ ಸಾಧನೆಯನ್ನು ಪಡೆಯುವುದು ಹೇಗೆ? ಎಂದು ತಿಳಿಯಬಯಸುತ್ತಾರೆ. ಇವೆಲ್ಲವೂ ಸರಳ ಮತ್ತು ಸುಲಭ ಎಂದು ಅವರು ತಿಳಿದಿದ್ದಾರೆ. ಅಂಥವರಿಗೆ ನಾನು ಏನೆಂದು ಉತ್ತರಿಸಲಿ?... ಈ ಎಲ್ಲ ಸಿದ್ದಿಗಳು ಮತ್ತು ಈ ಎಲ್ಲ ಸಾಧನೆಗಳು ಎಲ್ಲರಿಗೂ ಸಾಧ್ಯವಿಲ್ಲ ಎಂದು ನಾನು ಹೇಗೆ ಹೇಳಲಿ?... ಎಲ್ಲವನ್ನೂ ಅವರು ಮಾಡಲಾರರು, ಎಲ್ಲರಿಗೂ ಅದು ಪ್ರಾಪ್ತಿಯಾಗುವುದಿಲ್ಲ ಎಂದು ಅವರಿಗೆ ತಿಳಿಸುವುದಾದರೂ ಹೇಗೆ?...

₹175   ₹156

ಆತ್ಮವಿಶ್ವಾಸದ ಅರಿವು | Athmavishvasadha arivu

ಸಂಪಟೂರು ವಿಶ್ವನಾಥ್

₹70   ₹62

ಆಸ್ಕರ್ ವೈಲ್ಡನ ನೈಟಿಂಗೇಲ್ಸ್ | Aaskara Wildana Nightingales

"ಅಯ್ಯಾ ಹುಡುಗ ನಿನಗೇನು ಗೊತ್ತು ನಮ್ಮ ಸಂಕಟ ಮಕ್ಕಳನ್ನು ಮಂಚದ ಕೆಳಗೆ ಮಲಗಿಸಿ ನಾವು ಮಂಚದ ಮೇಲೆ ಗಿರಾಕಿಗಳೊಂದಿಗೆ ಚಿಕ್ಕಂದ ಆಡುತ್ತೇವೆ. ಹೊಟ್ಟೆಯಲ್ಲಿ ಸಂಕಟ ಹೊಗೆಯಾಡುತ್ತಿದ್ದರೂ ನಾವು ನಗುತ್ತಿರುತ್ತೇವೆ ಗಿರಾಕಿಗಳ ಖಷಿಪಡಿಸಲು, ಗಿರಾಕಿಗಳೇ ನಮಗೆ ದೇವರು. ಇದೆಲ್ಲಾ ಹೊಟ್ಟೆ ತುಂಬಿಸಿಕೊಳ್ಳಲು ನಾವಾಡುತ್ತಿರುವ ನಾಟಕವೆಂದು ನಮ್ಮ ಪುಟ್ಟ ಕಂದಮ್ಮಗಳಿಗೂ ತಿಳಿದ ಸತ್ಯ." -ಕಾಮಾಟಿಪುರದ ವೇಶ್ಯ

₹195   ₹174

ಇಂಗ್ಲಿಷ್ ಮೂಲಕ ಕನ್ನಡ ಕಲಿಯಿರಿ | English mulaka kannada kaliyiri

ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

₹195   ₹174