| Category: | ಕನ್ನಡ |
| Sub Category: | ಇತಿಹಾಸ |
| Author: | ರಾಜಲಕ್ಷ್ಮೀ ಎನ್ ಕೆ | Rajalakshmi N K |
| Publisher: | ನವಕರ್ನಾಟಕ ಪ್ರಕಾಶನ | Navakarnataka Publications |
| Language: | Kannada |
| Number of pages : | 168 |
| Publication Year: | 2026 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಅಂಡಮಾನ್ : ಇತಿಹಾಸದೊಳಗೊಂದು ಪಯಣ ಸಾಮಾನ್ಯವಾಗಿ ಇತಿಹಾಸದ ಪುಸ್ತಕಗಳು ಪ್ರಭುತ್ವದ ಸುತ್ತ ಗಿರಕಿ ಹೊಡೆಯುತ್ತ ಅಕ್ಷರ ರೂಪದಲ್ಲಿ ಅದನ್ನು ಶಾಶ್ವತವಾಗಿಸುವ ನರೇಟೀವ್ ಆಗಿರುತ್ತದೆ. ಆಯಾ ಪ್ರದೇಶಗಳ ಆಡಳಿತದ ಪ್ರಭುತ್ವವನ್ನ ನಿರೂಪಿಸುವ ದಿಕ್ಕೂಚಿಯಾಗಿರುತ್ತದೆ. ಶಕುಂತಳಾ ಶಿವರಾರಿರವರು ಪ್ರಭುತ್ವವನ್ನ ಹಿನ್ನೆಲೆಗಿಟ್ಟು ಖೈದಿಗಳ ನೆಲೆಸು ಅಂಡಮಾನನ್ನು ಆರೋಗ್ಯವಂತ ಸಮಾಜವಾಗಿ ಕಟ್ಟಲು ಹಾಗೂ ಬೆಳೆಸಲು ಶ್ರಮಿಸಿದ ಒಂದು ವರ್ಗ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಪಾತ್ರದ ಬಗ್ಗೆ ಬೆಳಕು ಚೆಲ್ಲುತ್ತಾರೆ. ಸಹಜೀವನ, ವಿವಿಧತೆಯಲ್ಲಿ ಏಕತೆ, ಭಿನ್ನತೆಯನ್ನ ಸ್ವೀಕರಿಸಿ ಸಂಭ್ರಮಿಸುವಿಕೆ ಇವೆಲ್ಲವೂ ಒಂದು ಆರೋಗ್ಯಪೂರ್ಣ ಸಮಾಜಕ್ಕೆ ಅವಶ್ಯಕ ಅನ್ನುವುದನ್ನು ಈ ಕೃತಿ ಅನಾವರಣಗೊಳಿಸುತ್ತದೆ. ಶಕುಂತಳಾ ಶಿವರಾಂ : ಪೋರ್ಟ್ಪ್ಲೇರ್ನಲ್ಲಿ 1938ರಲ್ಲಿ ಜನಿಸಿದರು. ವಿದ್ಯಾ ಇಲಾಖೆ ಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅವರು ಅಂಡಮಾನ್ ದ್ವೀಪಗಳ ಬಗ್ಗೆ, ಅಲ್ಲಿನ ಸಹ ಜೀವನದ ಸಂಸ್ಕೃತಿಯ ಬಗ್ಗೆ ಅಪರಿಮಿತ ಪ್ರೀತಿ ಉಳ್ಳವರು. ಹಿಂದಿ ಭಾಷೆಯಲ್ಲಿರುವ 'ಅಂಡಮಾನ್ ದ್ವೀಪಗಳು' ಇವರ ಮೊದಲ ಕೃತಿ. 'ಅಂಡಮಾನ್ ಕೆ ಇತಿಹಾಸ ಕ ಸಫರ್' ಇವರ ಎರಡನೆಯ ಕೃತಿಯಾಗಿದೆ. ಡಾ. ರಾಜಲಕ್ಷ್ಮೀ ಎನ್. ಕೆ. : ಮಂಗಳೂರಿನಲ್ಲಿ ನೆಲೆಸಿರುವ ಆಂಗ್ಲ ಪ್ರಾಧ್ಯಾಪಕರಾದ ಡಾ. ರಾಜಲಕ್ಷ್ಮೀ ಎನ್. ಕೆ. ಲೇಖಕಿ ಹಾಗೂ ವಿಮರ್ಶಕರಾಗಿ ಗುರುತಿಸಲ್ಪಟ್ಟಿದ್ದಾರೆ. ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಇವರ ಲೇಖನಗಳು, ಪುಸ್ತಕಗಳು ಪ್ರಕಟಗೊಂಡಿವೆ. ಅನುವಾದ ಅಧ್ಯಯನ ಹಾಗೂ ಸಂಸ್ಕೃತಿ ಅಧ್ಯಯನ ಇವರ ಆಸಕ್ತಿಯ ಕ್ಷೇತ್ರ ಅವರ ಇತ್ತೀಚಿನ ಅನುವಾದಿತ ಕೃತಿ 2024ರಲ್ಲಿ ಪ್ರಕಟವಾದ 'ಸಮ್ಮತಿ ಭಯಪೂರಿತ ಅಸಮರೂಪತೆ.'
ರಾಜಲಕ್ಷ್ಮೀ ಎನ್ ಕೆ | Rajalakshmi N K |
0 average based on 0 reviews.