| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಎಚ್.ಎ. ಪುರುಷೋತ್ತಮ ರಾವ್ | H A Purushtottama rao |
| Publisher: | ಕದಂಬ ಪ್ರಕಾಶನ | Kadamba Prakashana |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | 9789395 129237 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಅಪ್ಪಟ ಪರಿಸರ ಪ್ರೇಮಿಯಾದ ಪುರುಷೋತ್ತಮ ರಾಯರ ಅಪಾರವಾದ ಜೀವನಾನುಭವದ ನೆನಪುಗಳ ಮೆರವಣಿಗೆಯೇ ಈ ಪ್ರಬಂಧಗಳು. ನಮ್ಮ ಸುತ್ತಮುತ್ತಲ ವಿದ್ಯಮಾನಗಳನ್ನು ಘಟನಾನುಸಾರವಾಗಿ ವರ್ಣಿಸುತ್ತಲೇ ಪರಿಸರದ ಬಗ್ಗೆ ಜೀವ ವೈವಿಧ್ಯತೆಯ ಬಗ್ಗೆ ವಿಪುಲ ಮಾಹಿತಿ ನೀಡುವ ಈ ಪ್ರಬಂಧಗಳು ಸಭ್ಯ ನಾಗರಿಕರಾಗಿ ಬದುಕಬೇಕಾಗಿರುವ ನಮ್ಮ ಹೊಣೆಗಾರಿಕೆಯನ್ನು ನೆನಪಿಸುತ್ತವೆ. ನೈತಿಕ ಪಾಠವನ್ನೂ ಹೇಳುವ ಇವು ಸಮಾಜೋ-ಸಾಂಸ್ಕೃತಿಕ ಮಹತ್ವವುಳ್ಳ 5. ಪ್ರಬಂಧಗಳು ಎನ್ನಬಹುದು. ಸ್ವಾನುಭವವೇ ಇಲ್ಲಿನ ಪ್ರಬಂಧಗಳಲ್ಲಿ ಎದ್ದು ಕಾಣುವ 7 ಅಂಶವಾದರೂ ಲೇಖಕರ ನೆಲದ ಪ್ರೀತಿ, ಜೀವನ ಪ್ರೀತಿಗಳು ಜೀವನ ಮೌಲ್ಯಗಳೊಂದಿಗೆ ಹಾಸುಹೊಕ್ಕಾಗಿ ಬೆರೆತು ಹೋಗಿವೆ. ಮುಂದಿನ ತಲೆಮಾರಿಗೆ ಸ್ವಚ್ಛವಾದ ಕುಡಿಯುವ ನೀರನ್ನು, ಮಲಿನಗೊಳ್ಳದ ನೀಲಾಕಾಶವನ್ನು, ವಿಷಾಕ್ತಗೊಳ್ಳದ జల ಸಂಪತ್ತನ್ನು, ಪರಿಶುದ್ಧ ವಾತಾವರಣವನ್ನು ಉಳಿಸಿಹೋಗುವುದು ನಮ್ಮೆಲ್ಲರ ಪ್ರಥಮ ಆದ್ಯತೆಯ ಕರ್ತವ್ಯ ಎಂಬುದರ ಜೊತೆಗೆ ಭೂಮಿಯು ಮನುಷ್ಯನಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿರುವ ಅಸಂಖ್ಯಾತ ಜೀವಕೋಟಿಗೂ ಮನುಷ್ಯನಿಗಿರುವಷ್ಟೇ ಭೂಮಿಯ ಮೇಲೆ ಹಕ್ಕಿದೆ ಎಂಬುದರ ಅರಿವನ್ನು ಮೂಡಿಸುವ ಈ ಪ್ರಬಂಧಗಳು ಕನ್ನಡದ ಓದುಗರಿಗೆ ಓದಿನ ಸುಖ, ಅರಿವು ಎರಡನ್ನೂ ಪ್ರಾಪ್ತವಾಗಿಸುವ ಸಫಲ ಬರವಣಿಗೆಯಾಗಿದೆ.
-ಡಾ. ಎಚ್.ಎಸ್. ಸತ್ಯನಾರಾಯಣ
(ಮುನ್ನುಡಿಯಿಂದ)
ಎಚ್.ಎ. ಪುರುಷೋತ್ತಮ ರಾವ್ | H A Purushtottama rao |
0 average based on 0 reviews.