| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ವಿಶ್ವೇಶ್ವರ್ ಭಟ್ | Vishweshara Bhat |
| Publisher: | Vishwavani Pustaka |
| Language: | Kannada |
| Number of pages : | |
| Publication Year: | 2026 |
| Weight | 300 |
| ISBN | 9788197590412 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಈ ಕೃತಿಯಲ್ಲಿ ಮೂವರೂ ಮಕ್ಕಳು ಶಿವರಾಮ ಕಾರಂತರೆಂಬ ಮಹಾನ್ ಚೇತನದ ಕನಸುಗಳ ಪ್ರಯೋಗಶಾಲೆಯಾದ 'ಬಾಲವನ' ಹಾಗೂ ಅದರ ಪರಿಸರವನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಕಾರಂತರು ಎಂದಿಗೂ ಮಕ್ಕಳ ಮೇಲೆ ತಮ್ಮ ಅಭಿಪ್ರಾಯಗಳನ್ನು ಹೇರಲಿಲ್ಲ. ಬದಲಿಗೆ, ಸ್ವತಂತ್ರವಾಗಿ ಆಲೋಚಿಸುವುದನ್ನು ಕಲಿಸಿಕೊಟ್ಟರು. ಕೆಲವು ಜಾಗಗಳಿಗೆ ಆತ್ಮವಿರುತ್ತದೆ. ಮೂವರೂ ಮಕ್ಕಳು ಅಲ್ಲಿ ಪುಸ್ತಕಗಳನ್ನು ಓದುವುದರ ಜತೆಗೆ ಯಕ್ಷಗಾನ, ಸಂಗೀತ, ನಾಟಕ ಮತ್ತು ವಿಜ್ಞಾನದ ಪ್ರಯೋಗಗಳನ್ನು ಹತ್ತಿರದಿಂದ ನೋಡುತ್ತಾ ಬೆಳೆದರು. ಕಾರಂತರು ತಮ್ಮ ಬದುಕಿನ ಬಹುಪಾಲು ಸಮಯವನ್ನು ಕಳೆದ ಈ ಜಾಗ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಇತಿಹಾಸದಲ್ಲಿ ಒಂದು ಪವಿತ್ರ ತಾಣವಾಗಿ ಚಿತ್ರಿತವಾಗಿದೆ. ಈ ಪುಸ್ತಕದಲ್ಲಿ ಕಾರಂತರ ಜೀವನದ ಶಿಸ್ತು, ಸಮಯ ಪ್ರಜ್ಞೆ ಮತ್ತು ಸಾಂಪ್ರದಾಯಿಕ ನಂಬಿಕೆಗಳನ್ನು ಪ್ರಶ್ನಿಸುವ ಅವರ ವೈಚಾರಿಕ ನಿಲುವುಗಳು ಮನೆಯೊಳಗೆ ಹೇಗೆ ಪ್ರತಿಫಲಿಸುತ್ತಿದ್ದವು ಎಂಬುದನ್ನು ಮಕ್ಕಳು ವಿವರಿಸಿದ್ದಾರೆ. ತಂದೆಯ ಸಾಹಿತ್ಯಕ ಸಾಧನೆಯೊಂದಿಗೆ ಅವರ ವ್ಯಕ್ತಿತ್ವದ ಮಾನವೀಯ ಮುಖಗಳು ಇಲ್ಲಿ ಆಕರ್ಷಕವಾಗಿ ಮೂಡಿಬಂದಿವೆ. ಕಾರಂತರು ಒಬ್ಬ ಸಾಹಿತಿಯಾಗಿ, ಸಾರ್ವಜನಿಕ ವ್ಯಕ್ತಿಯಾಗಿ ಬೆಳೆದು ನಿಲ್ಲುವಲ್ಲಿ ಅವರ ಮೇಲೆ ಗಾಢ ಪ್ರಭಾವ ಬೀರಿದವರು, ಅವರ ಶ್ರೇಯಸ್ಸನ್ನು ಬಯಸಿದವರು, ಹಿತೈಷಿಗಳು, ಸ್ನೇಹಿತರು, ಬಂಧು-ಬಾಂಧವರು, ಅವರ ಜತೆಗೆ ನಿಂತವರು .
ಹಾಗೂ ನೆರವಾದವರ ಬಗ್ಗೆಯೂ ಲೇಖಕರು ಸ್ಮರಿಸಿಕೊಂಡಿದ್ದಾರೆ ಒಬ್ಬ ಅತಿಮಾನುಷ ವ್ಯಕ್ತಿತ್ವದ ವ್ಯಕ್ತಿಯೂ ಕೂಡ ಸಾಮಾನ್ಯ ತಂದೆಯಂತೆ ಮಕ್ಕಳನ್ನು ಪ್ರೀತಿಸುತ್ತಿದ್ದರು, ಸಿಟ್ಟು ಮಾಡುತ್ತಿದ್ದರು ಮತ್ತು ಅವರಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂಬುದು ಈ ಪುಸ್ತಕ ಓದಿದಾಗ ತಿಳಿಯುತ್ತದೆ. ಕಾರಂತರನ್ನು ಕೇವಲ ಒಬ್ಬ ಲೇಖಕ ಅಥವಾ ಸಾಹಿತಿ ಎಂದು ನೋಡಿದವರಿಗೆ, ಈ ಪುಸ್ತಕ ಅವರ ಇನ್ನೊಂದು ಮಗ್ಗುಲನ್ನು ಪರಿಚಯಿಸುತ್ತದೆ. ಕಾರಂತರು ತಮ್ಮ ಮಕ್ಕಳ ಪಾಲಿಗೆ ಒಂದು 'ಲೈಬ್ರರಿ'ಯಂತಿದ್ದರು. ಬೇಕಾದಾಗ ಅಲ್ಲಿ ಜ್ಞಾನ ಸಿಗುತ್ತಿತ್ತು, ಬೇಡವಾದಾಗ ಅವರು ಒಬ್ಬಂಟಿಯಾಗಿರಲು ಬಿಡುತ್ತಿದ್ದರು.
'ಕಾರಂತರ ಸುಳಿಯಲ್ಲಿ' ಕೃತಿ ಕೇವಲ ಕಾರಂತರ ಅಭಿಮಾನಿಗಳಿಗೆ ಮಾತ್ರವಲ್ಲದೇ, ಇಂದಿನ ಪೋಷಕರಿಗೂ ಒಂದು ತೋರುದೀಪದಂತಿದೆ. ಇದು ಕೇವಲ ಒಂದು ಸಂಸರಣಾ ಗ್ರಂಥವಲ್ಲ, ಅದು ಮನುಷ್ಯ ಸಂಬಂಧಗಳ ನಡುವಿನ ಸೂಕ್ಷ್ಮ ಎಳೆಗಳ ಅನಾವರಣ. ಒಬ್ಬ ಮಹಾನ್ ವ್ಯಕ್ತಿಯ ನೆರಳಿನಲ್ಲಿ ಸ್ವಂತಿಕೆ ಕಳೆದುಕೊಳ್ಳದೇ, ಅದೇ ನೆರಳಿನಿಂದ ಬೆಳಕು ಪಡೆದು ಬೆಳೆಯುವುದು ಹೇಗೆಂಬುದಕ್ಕೆ ಈ ಮೂವರು ಮಕ್ಕಳ ಬರಹಗಳೇ ಸಾಕ್ಷಿ. ಈ ಪುಸ್ತಕವು ಕಾರಂತರ ಬದುಕಿನ ಸಂಗ್ರಹದ ಹಳೆಯ ಫೋಟೋ ಆಲ್ಲಂ ಇದ್ದಂತೆ. ಧೂಳು ಕೊಡವಿ ನೋಡಿದಷ್ಟೂ ಹೊಸ ಬಿಂಬಗಳು ಕಾಣಿಸುತ್ತವೆ.
- ವಿಶ್ವೇಶ್ವರ ಭಟ್
ವಿಶ್ವೇಶ್ವರ್ ಭಟ್ | Vishweshara Bhat |
0 average based on 0 reviews.