| Category: | ಕನ್ನಡ |
| Sub Category: | ಆತ್ಮಕಥೆ ಜೀವನ ಚರಿತ್ರೆ |
| Author: | ವಿಶ್ವೇಶ್ವರ್ ಭಟ್ | Vishweshara Bhat |
| Publisher: | Vishwavani Pustaka |
| Language: | Kannada |
| Number of pages : | |
| Publication Year: | 2026 |
| Weight | 300 |
| ISBN | 978-81-972904-8-1 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಎಲ್ಲವೂ ದೇವರ ಕೃಪೆ, ಎಲ್ಲವೂ ಅವನ ಇಚ್ಛೆ ಎಂದು ನಂಬುವುದು ಆಸ್ತಿಕತೆ. ಇನ್ನೊಂದೆಡೆ, ಎಲ್ಲವೂ ನನ್ನ ಕಠಿಣ ಪರಿಶ್ರಮ, ನನ್ನ ಜಾಣ್ಮ ಮತ್ತು ನನ್ನ ಆಲೋಚನಾ ಶಕ್ತಿಯ ಫಲ ಎಂದು ಭಾವಿಸುವುದು ನಾಸ್ತಿಕತೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. 'ನನ್ನ ದಾರಿಯೇ ಸರಿ' ಎಂದು ನಂಬುವ ಆಸ್ತಿಕನಾಗಲಿ ಅಥವಾ ಅದೇ ರೀತಿ ಹಠ ಹಿಡಿಯುವ ನಾಸ್ತಿಕನಾಗಲಿ, ಯಾರೊಬ್ಬರೂ ಸರಿಯಾದ ಫಲಿತಾಂಶವನ್ನು ಪಡೆಯಲಾರರು. ನಾವು ಬಯಸಿದ ಗುರಿ ನಮಗೆ ದಕ್ಕುವುದಿಲ್ಲ.
ಒಂದೆಡೆ, ನೀವು ಮಾಡುವ ಕೆಲಸವನ್ನು ಸಂಪೂರ್ಣ ಸಮರ್ಪಣಾ ಮನೋಭಾವ, ಪ್ರಾಮಾಣಿಕತೆ ಮತ್ತು ಹೊಸತನದೊಂದಿಗೆ ಮಾಡಬೇಕು. ಮತ್ತೊಂದೆಡೆ, ಆ ದೈವಿಕ ಕೃಪೆಯನ್ನು ವಿನಮ್ರವಾಗಿ ಒಪ್ಪಿಕೊಳ್ಳಬೇಕು. ಈ ಎರಡೂ ಅಂಶಗಳು ಸಮ್ಮಿಳಿತಗೊಂಡಾಗ ಮಾತ್ರ ಜೀವನದ ಪಯಣ ಸಾರ್ಥಕವಾಗುತ್ತದೆ ಎಂಬುದು ನನ್ನ ನಂಬಿಕೆ.
ಭಗವದ್ಗೀತೆ ಇರಲಿ, ಪ್ರವಾದಿ ಮೊಹಮ್ಮದ್ ಇರಲಿ, ಜೈನ ಧರ್ಮ ಅಥವಾ ಬೌದ್ಧ ಧರ್ಮವೇ ಇರಲಿ... ಎಲ್ಲವೂ ಹೇಳುವುದು ಒಂದೇ - 'ಪರಿಶ್ರಮ ಪಡು, ಫಲವನ್ನು ನಿರೀಕ್ಷಿಸಬೇಡ'. ನೀವು ಪ್ರಾಮಾಣಿಕವಾಗಿ ಶ್ರಮಿಸಿದರೆ, ಆ ಭಗವಂತ ಅದಕ್ಕೆ ತಕ್ಕ ಫಲಿತಾಂಶವನ್ನು ನೀಡುತ್ತಾನೆ. ನಾನು ಈ ಪುಸ್ತಕ ಬರೆದ ಉದ್ದೇಶದ ಸಾರವೂ ಇದೇ ಆಗಿದೆ.
ಹಾಗಂತ, ಈ ಪುಸ್ತಕವು ನನ್ನ ಕಷ್ಟ ಅಥವಾ ಸಂಕಷ್ಟಗಳನ್ನು ಹಂಚಿಕೊಂಡು ಜನರ ಅನುಕಂಪ ಗಳಿಸಲಿಕ್ಕಾಗಿ ಬರೆದಿದ್ದಲ್ಲ ಅಥವಾ ನಾನು ಸಾಧಿಸಿದ ವಿಜಯ ಮತ್ತು ಯಶಸ್ಸಿನ ಬಗ್ಗೆ ಬಡಾಯಿ ಕೊಚ್ಚಿಕೊಳ್ಳಲು ಬರೆದಿದ್ದೂ ಅಲ್ಲ. ನಾನು ಎಂಥಾ ದಯನೀಯ ಸ್ಥಿತಿಯಿಂದ ಬಂದೆ ಎಂದು ತೋರಿಸಿಕೊಳ್ಳುವುದು ಅಥವಾ ನಾನು ಎಷ್ಟು ದೊಡ್ಡವನು ಎಂದು ಸಾರುವುದು ಇದರ ಉದ್ದೇಶವಲ್ಲ.
ನಿಮ್ಮ ಪರಿಶ್ರಮವು ದೈವಿಕ ಕೃಪೆಯೊಂದಿಗೆ ಬೆರೆತಾಗ ಮಾತ್ರ ಅದು ಫಲಪ್ರದವಾಗುತ್ತದೆ ಎಂಬುದನ್ನು ಒತ್ತಿ ಹೇಳುವುದೇ ಈ ಪುಸ್ತಕದ ಮುಖ್ಯ ಆಶಯ.
--ಬ್ರಹ್ಮಾನಂದಂ
ವಿಶ್ವೇಶ್ವರ್ ಭಟ್ | Vishweshara Bhat |
0 average based on 0 reviews.