| Category: | ಕನ್ನಡ |
| Sub Category: | ಕಾದಂಬರಿ |
| Author: | ಚಿದಾನಂದ ಮುದ್ದಿ | Chidananda muddi |
| Publisher: | ಮುದ್ದಿ ಮೈಂಡ್ಸ್ | Muddi Minds |
| Language: | Kannada |
| Number of pages : | |
| Publication Year: | 2026 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಇದು ಸಪ್ತಮಿ ಎಂಬ ಹುಡುಗಿ-ಏಳುಕೋಟಿ ಎಂಬ ಹುಡುಗ, ಇವರಿಬ್ಬರ ಅನೂಹ್ಯ ಜೀವವೃತ್ತಾಂತ. ಕನ್ನಡ ಭಾಷೆಯ ಗತ್ತು ಗೈರತ್ತುಗಳ, ಆಹ್ಲಾದಕರ ಸೊಗಡುಗಳು, ಉತ್ತರ ಕರ್ನಾಟಕದ ಕನ್ನಡದಲ್ಲಿ ಏಕ್ಷಮ್ ದುಪ್ಪಟ್ಟಾಗುವ ಚಮತ್ಕಾರ ಈ ಕೃತಿಯಲ್ಲಿದೆ. ಭಾಷೆಯ ಜೊತೆಗೆ ಬದುಕನ್ನು ಚಪ್ಪರಿಸುವ ವಿಚಿತ್ರ ತಾಕತ್ತು, ಬಯಲು ಸೀಮೆಯ ನವ ಪ್ರತಿಭೆ ಚಿದಾನಂದನಿಗೆ ಒಲಿದಿದೆ. ಹೊಗಳುವುದಕ್ಕೆಂದಲ್ಲ ಹಾಗೇ ಸುಮ್ಮನೇ ಚಿದಾನಂದ
ಬಗ್ಗೆ ಉತ್ತರ ಕರ್ನಾಟಕ ಭಾಷೆಯಲ್ಲಿ ಹೀಗನ್ನ ಬಹುದು " ಇಂವ ಕತಿ ಒದರೋ ಅಂಥ ಅಗದಿ ತ್ರಾಸ್ ಕೊಡೋ, ಅತಿ ಭಾರದ ಕೆಲಸಾನ ಲಪಕ್ಕನ ಮುಕಳ್ಳಾಗ ಕೈ ಹಾಕಿ ಎತ್ತಿ ಒಗ್ಗು, ಮೊದಲ ಜಂಗಿ ಕುಸ್ಕೃಾಗ ಗೆದ್ದು-ಜಿಗುದು, ಪೈಲ್ವಾನ್ ಆಗ್ಯಾನ ಅನಬೋದು ನೋಡ್ರಿ..!”ಬರಹಗಾರ ಬದುಕನ್ನು ಸವಿದಂತೆ ಕಂಡರೆ ಸಾಲದು, ಅದನ್ನು ಅಳೆದು ತೂಗುತ್ತಾ ಸರಳವಾಗಿ ಮಾನವ ಎಂಥ ಅಬ್ಬೇಪಾರಿ ಬೇವರ್ಸಿ ಎಂಬುವುದನ್ನು ಬೆರಗು ಹಾಗೂ ಅಮಾಯಕತೆ ಜೊತೆಗೆ ಬಣ್ಣಿಸಬೇಕು. ಅವೆಲ್ಲ ಕಲೆಗಳು ಲೇಖಕನಿಗೆ ಒಲಿದಿರುವುದು ಈ ಕೃತಿಯಲ್ಲಿ ಕಾಣುತ್ತದೆ. ಆತ ಎಲ್ಲರಿಗೂ ಸಾಧ್ಯಂತವಾಗಿ ತಲುಪಲಿ ಎಂದು ಒಬ್ಬ ಓದುಗನಾಗಿ ಹಾರೈಸುತ್ತಾ ಶುಭಾಶಯಗಳೊಂದಿಗೆ ನಮಿಸುತ್ತೇನೆ.ಜೈ ಸಪ್ತಕೋಟಿ, ಜೈ ಮುದ್ದಿ, ಜೈ ಕನ್ನಡ, ಜೈ ಓದುಗ
- ಯೋಗರಾಜ್ ಭಟ್
ಚಿದಾನಂದ ಮುದ್ದಿ | Chidananda muddi |
0 average based on 0 reviews.