ಯಂತ್ರ ಕಥೆ ಯಂತ್ರ ಸಾಧನಗಳ ಉಗಮ, ಇತಿಹಾಸ ಹಾಗೂ ದೈನಂದಿನ ಬದುಕಿನಲ್ಲಿ ಅವುಗಳ ಪಾತ್ರವನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಒಂದು ಪ್ರಯತ್ನ. ವಿಜ್ಞಾನದ ಪ್ರಗತಿಯಲ್ಲಿ ಯಂತ್ರಗಳ ಪಾತ್ರ ಮಹತ್ತರ. ಪ್ರತಿಯೊಂದು ಯಂತ್ರವೂ ವಿಕಾಸದ ಹಾದಿಯಲ್ಲಿ ತನ್ನ ವಿಶಿಷ್ಟ ಕೊಡುಗೆ ನೀಡಿದೆ. ಯಂತ್ರೋಪಜೀವಿ ಮಾನವನಿಗೆ ಈ ಪರಂಪರೆಯ ಅಧ್ಯಯನ ಅನಿವಾರ್ಯ, ಲಾಭದಾಯಕ. ಈ ಪುಸ್ತಕದ ಲೇಖಕರಾದ ಶ್ರೀ ಎಂ. ಶಿವಕುಮಾರ್ ಸ್ವತಃ ಯಂತ್ರ ವಿಜ್ಞಾನದಲ್ಲಿ ವಿಶೇಷ ಪರಿಣತಿ ಹೊಂದಿರುವವರು, ಹಲವು ಯಂತ್ರ ಹತಾರಗಳ ವಿನ್ಯಾಸಕ್ಕೆ, ನಿರ್ಮಾಣಕ್ಕೆ ಕಾರಣ ಪುರುಷರು. ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಸಾಹಿತಿಯಾಗಿರುವ ಲೇಖಕರ ಈ ಕೃತಿ ವಿಜ್ಞಾನ ವಿಷಯಕ್ಕೆ ಸಾಹಿತ್ಯದ ಮೆರುಗನ್ನು ಪಡೆದಿದ್ದು, ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಪ್ರಥಮ ಪ್ರಶಸ್ತಿ ಪಡೆದ ಪುಸ್ತಕವಾಗಿದೆ.
| Category: | ಕನ್ನಡ |
| Sub Category: | ಅಂಕಣ ಬರಹಗಳು |
| Author: | ಎಂ ಶಿವಕುಮಾರ್ | M Shivakumar |
| Publisher: | ಕದಂಬ ಪ್ರಕಾಶನ | Kadamba Prakashana |
| Language: | Kannada |
| Number of pages : | |
| Publication Year: | |
| Weight | 300 |
| ISBN | 9789395129619 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಎಂ ಶಿವಕುಮಾರ್ | M Shivakumar |
0 average based on 0 reviews.