nil
ಕು.ಗೋ
ಪುಸ್ತಕವೊಂದು ವಾಸ್ತವ ಪ್ರಪಂಚಕ್ಕೆ ಸೆಡ್ಡು ಹೊಡೆದರೆ ಹೇಗೆ? ಕತೆಯಲ್ಲಿ ಓದುಗನೇ ಒಂದು ಪಾತ್ರವಾದರೆ ಏನು ಗತಿ? ಸರ್ವಾಧಿಕಾರಿಯೊಬ್ಬ ಪ್ರಭುತ್ವಕ್ಕೆ ವಿರುದ್ಧವಾದ ಪುಸ್ತಕಗಳಿರುವ ಲೈಬ್ರರಿಗೆ ಹೋದರೆ ಏನಾಗಬಹುದು? ಪುಸ್ತಕಗಳ ಬಗ್ಗೆ, ಓದುವುದರ ಬಗ್ಗೆ, ಲೈಬ್ರರಿಯ ಬಗ್ಗೆ ಪ್ರಪಂಚದ ಬೇರೆ ಬೇರೆ ದೇಶಗಳ ಕತೆಗಾರರು ಬರೆದಿರುವ ಸಣ್ಣಕತೆಗಳ ಸಂಕಲನ ಇದು. ಇಲ್ಲಿ ಲೂಯಿಜಿ ಪಿರಾಂಡೆಲೊ, ಐಸಾಕ್ ಬಾಬೆಲ್, ಹೋರ್ಹೆ ಲೂಯಿಸ್ ಬೋರ್ಹೆಸ್, ಹುಲಿಯೊ ಕೋರ್ತಜಾರ್, ಇತಾಲೊ ಕಲ್ವಿನೊ ಮೊದಲಾದ ವಿಖ್ಯಾತ ಲೇಖಕರಿರುವಂತೆ ಎದುಅರ್ದೊ ಗಲಿಯಾನೊ, ಮಾರ್ಗರೆಟ್ ಆಟ್‌ವುಡ್, ರೋಡ್ರಿಗೊ ರೇಯಿ ರೋಸ, ರೊಬರ್ತೊ ಕೆಸಾದ ಮುಂತಾದ ಸಮಕಾಲೀನ ಲೇಖಕರೂ ಇದ್ದಾರೆ. ಮಲಯಾಳಂ ಭಾಷೆಯ ಒ.ವಿ. ವಿಜಯನ್, ಪಾಲ್ ಝಕಾರಿಯ ಅವರ ಕತೆಗಳೂ ಇಲ್ಲಿವೆ. ಎಸ್. ದಿವಾಕರ್ ತಮ್ಮ ಹಲವು ದಶಕಗಳ ಓದಿನ ಉಗ್ರಾಣದಿಂದ ಹೆಕ್ಕಿ ತೆಗೆದು ಅನುವಾದಿಸಿರುವ ಇಂಥದೊಂದು ಕಥಾ ಸಂಕಲನ ಇಂಗ್ಲಿಷಿನಲ್ಲೂ ಇದ್ದಂತಿಲ್ಲ. ನೀವು ಪುಸ್ತಕವನ್ನು ಪ್ರೀತಿಸುವವರೆ? ಓದುವುದನ್ನು ಇಷ್ಟಪಡುವವರೆ? ಹಾಗಿದ್ದರೆ ಇಲ್ಲಿ ಎರಡು ರಟ್ಟುಗಳ ನಡುವೆ ಇರುವ ಕತೆಗಳನ್ನು ಓದಲೇಬೇಕು.
#
Showing 721 to 750 of 5120 results