• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Sub Categories

Authors

Languages

Book Type

Clear All
Filter
ಪದ್ದಣ ಮನೋರಮೆ | Paddanna Manorame

ಶಾಲಿನಿಯದ್ದು ರಕ್ತಗತೆ ಪ್ರತಿಭೆ. ಅಪ್ಪನಂತೆ ಅಕ್ಷರಗಳ ಜತೆ, ವಾಕ್ಯಗಳ ಜತೆ ಪದಗಳ ಜತೆ ಸರಸವಾಡುವ ಚತುರೆ ಕೀ ಬೋರ್ಡ ಮೇಲೆ ಬೆರಳಾಡಿಸಲು ಹೊರಟರೆ ಒಂದು ಸಶಕ್ತ ಲೇಖನ ಸಿದ್ಧವಾದಂತೆಯೇ ಹಾಗೆಯೇ ಹೊಂಚು ಹಾಕಿ ಕಥೆ ಬರೆಯಲು ಹೊರಟರೆ ಜೀವನನ್ಯುಸ್ ವಿಷಯಗಳು ಕೂಡ ರೂಪ ಪಡೆಯುವ ಚಮತ್ಕಾರವನ್ನೊಮ್ಮೆ ನೀವು ನೋಡಬೇಕು. - ಗಣೇಶ್ ಕಾಸರಗೋಡು ಖ್ಯಾತ ಸಿನಿ ಪತ್ರಕರ್ತರು, ಲೇಖಕರು.

₹150   ₹134

ಪರವಶ/Paravasha

nil

₹175   ₹156

ಪರ್ಲಾಕ ಹೋಮ್ಸ್ ಸಾಹಸಗಳು | Sherlock Holmes Sahasagalu

ಅಂಗಿಯ ಗುಂಡಿ, ಚಪ್ಪಲಿಗಂಟಿದ ಕೆಸರು, ಮೇಜನ್ನು ತಯಾರಿಸಲು ಬಳಸಿದ ಮರ, ವ್ಯಕ್ತಿಯೊಬ್ಬ ಪೆನ್ನನ್ನು ಹಿಡಿಯುವ ರೀತಿ, ನಡಿಗೆಯಲ್ಲಿರುವ ಚೂರೇ ಚೂರು ವಕ್ರತೆ, ಕೋಣೆಯಲ್ಲಿನ ಪರಿಮಳ, ಕರವಸ್ತ್ರಕ್ಕಂಟಿದ ಕಣ್ಣೀರು- ನಾವೆಲ್ಲ ನಿರ್ಲಕ್ಷಿಸಿ ಮುನ್ನಡೆಯಬಹುದಾದ ಇಂಥ ಸಣ್ಣ ವಿಷಯಗಳೇ ಷರ್ಲಾಕ್ ಹೋಮ್ಸ್‌ನನ್ನು ಹಿಡಿದು ನಿಲ್ಲಿಸುತ್ತಿದ್ದವು. ಅಪರಾಧದ ಸ್ಥಳದಲ್ಲಿ ಕಂಡ ನಗಣ್ಯವೆನ್ನುವಂತೆ ತೋರುವ ಸುಳಿವುಗಳನ್ನು ಹಿಂಬಾಲಿಸಿ, ಅವಕ್ಕೆ ತನ್ನ ಸರಿಸಾಟಿಯಿಲ್ಲದ ತರ್ಕಸರಣಿಯನ್ನು ಹೊಂದಿಸಿ, ಅಚ್ಚರಿಯೆನಿಸುವಂತೆ ಕೊಲೆಗಾರನನ್ನು ಪತ್ತೆ ಮಾಡುವ ವಿಶಿಷ್ಟ ದಾರಿಯೊಂದು ಅವನಿಗೆ ಗೊತ್ತಿತ್ತು. ಟೋಪಿ, ಸಿಗಾ‌ರ್ ಹಾಗೂ ಸಣ್ಣದೊಂದು ಭೂತಗನ್ನಡಿಯ ಜೊತೆ ಜಗತ್ತಿನ ಓದುಗರೆಲ್ಲರ ಮನಸ್ಸಿನಲ್ಲಿ ಅಷ್ಟೊತ್ತಿದಂತೆ ಉಳಿದಿರುವ ಪತ್ತೇದಾರ ಷರ್ಲಾಕ್ ಹೋಮ್ಸ್. ಈ ಕಾಲ್ಪನಿಕ ಪಾತ್ರದ ಸೃಷ್ಟಿಕರ್ತ ಅರ್ಥರ್ ಕಾನನ್ ಡಾಯ್ಸ್, ಹೋಮ್ಸ್ ಇರುವವರೆಗೆ ತಾನು ಬೇರೇನೂ ಬರೆಯಲಾರೆ ಎಂದೆನಿಸಿ ಒಂದು ಕತೆಯಲ್ಲಿ ಅವನನ್ನು ಸಾಯಿಸಿಬಿಟ್ಟನಂತೆ. ಆದರೆ ಅದಕ್ಕೆ ಓದುಗರ ಪ್ರತಿಕ್ರಿಯೆ ಹೇಗಿತ್ತೆಂದರೆ, ವಿಧಿಯಿಲ್ಲದೆ ಕೆಲ ವರ್ಷಗಳ ನಂತರ ಡಾಯ್ಸ್ ಇನ್ನೊಂದು ಕತೆ ಬರೆದು ಹೋಮ್ಸ್‌ನನ್ನು ಬದುಕಿಸಬೇಕಾಯ್ತು! ಅದ್ಭುತ ಪಾತ್ರಗಳೇ ಹಾಗೆ ಅಜರಾಮರ- ಸೃಷ್ಟಿಕರ್ತನೇ ಬಯಸಿದರೂ ಅವು ಸಾಯುವುದಿಲ್ಲ!

₹250   ₹223

ಪಾರಿಜಾತ : ಸಮಗ್ರ ಕಥೆಗಳು | Paarijaata

ಕಸ್ತೂರಿ ಬಾಯರಿ ಅವರ ಸಮಗ್ರ ಕಥಾ ಸಂಕಲನ ʼಪಾರಿಜಾತʼ ಪಾರಿಜಾತ : ಸಮಗ್ರ ಕಥೆಗಳು / Paarijaata parijatha kasturi bayari / kasturi baayari / samagra kathegalu

₹700   ₹623

ಪುಟ್ಟ ಪುಟ್ಟಿ ಕಥೆಗಳು | Putta Putti Kathegalu

ಮಕ್ಕಳ ಸಾಹಿತ್ಯ ಎಂದಾಗ. ಯಾವ ವಯಸ್ಸಿನ ಮಕ್ಕಳು ಎಂಬ ವಿಚಾರವೂ ಗಮನಾರ್ಹ ಸಂಗತಿಯಾಗುತ್ತೆದೆ. ಹದಿನೈದು ವರ್ಷದೊಳಗಿನ ಮಕ್ಕಳನ್ನು, ಮುಗ್ಧರು ಎಂದು ಗುರುತಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಬಹು ಬೇಗ ಮುಗ್ಧತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಅನಿರ್ಬಂಧಿತ ಮನರಂಜನಾ ಯುಗದಲ್ಲಿ ನಾವು ಬದುಕುತ್ತಿದ್ದು, ಅದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂಬುದನ್ನು ಗಮನಿಸದಿರುವಂತಿಲ್ಲ. ಆದುದರಿಂದ ಈ ಕಾಲದಲ್ಲಿ ಹುಟ್ಟಿದ ಮಕ್ಕಳ ಸಾಹಿತ್ಯ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಪ್ರಸ್ತುತ ಪ್ರೊ. ನಾಗ ಎಚ್. ಹುಬ್ಬಿ ಸಂಪಾದಕರಾಗಿ ತಂದಿರುವ ಸಂಕಲನದ ಆಯ್ಕೆಯ ಚೌಕಟ್ಟು, ಹೀಗೆ ಪ್ರಶಸ್ತಿ ವಿಜೇತ ಮಕ್ಕಳ ಸಾಹಿತಿಗಳಿಗೆ ಎಂಬ ವಿಚಾರ ಗಮನಾರ್ಹ ಸಂಗತಿಯಾಗುತ್ತದೆ. ಈ ಸಂಕಲನದ ಸಂಪಾದಕರಾಗಿರುವ ಪ್ರೊ. ನಾಗ ಹುಬ್ಬಿ ಕನ್ನಡ ನಾಡಿನಿಂದ ಸಾವಿರಾರು ಮೈಲಿ ದೂರದಲ್ಲಿರುವ ರಾಂಚಿ (ಝಾರ್ಖಂಡ್)ಯಲ್ಲಿ ಕುಳಿತು ಕನ್ನಡ ಸಾಹಿತ್ಯಕ್ಕೆ ನಿರಂತರವಾಗಿ ಕೊಡುಗೆ ನೀಡಿದ್ದಾರೆ. ಕತೆಗಾರರಾಗಿ, ಅನುವಾದಕರಾಗಿ ಹತ್ತಾರು ಕೃತಿಗಳನ್ನು ನೀಡಿದ್ದಾರೆ. ಮಕ್ಕಳ ಸಾಹಿತ್ಯ ಕೃತಿಗಳನ್ನು ಬೇರೆ ಭಾಷೆಗಳಿಂದ ಅನುವಾದಿಸಿದ್ದಾರೆ. ಬುಡಕಟ್ಟು ಜನಾಂಗದ ಅಧ್ಯಯನ ಕ್ಷೇತ್ರಕ್ಕೆ ಅವರ ಕೊಡುಗೆ ಅಮೂಲ್ಯವಾದುದು. 'ಜೇನುಹುಳುವಿನಂತೆ ಸದಾಕಾಲವೂ ಸೃಜನಶೀಲವಾಗಿರುವ ಅವರ ಈ ಮಕ್ಕಳ ಸಾಹಿತ್ಯ ಸಂಕಲನ ಅವರ ಕಾರ್ಯತತ್ಪರತೆಗೆ ಒಂದು ಹೊಸ ಸೇರ್ಪಡೆ.

₹140   ₹125

ಪುರಾಣ ಗಿರಾಣ ಇತ್ಯಾದಿ | Purana Girana Ithyadi

ಸವಿರಾಜ ಆನಂದೂರು ಕಾವ್ಯಲೋಕದಿಂದ ಕಥಾ ಲೋಕಕ್ಕೆ `ಪುರಾಣ ಗಿರಾಣ ಇತ್ಯಾದಿ' ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಈ ಸಂಕಲನಕ್ಕೆ ಬೇಕಾದ ಅಪಾರ ಓದು, ವಿಶ್ಲೇಷಣೆ, ಅದಕ್ಕೆ ಬೇಕಾದ ಪೂರ್ವ ಸಿದ್ಧತೆ, ಕತೆಗೆ ಬೇಕಾದ ಚೌಕಟ್ಟಿನೊಳಗೆ ಕೂರಿಸುವ ಜಾಣ್ತನ, ಎಲ್ಲವೂ ಅವರಿಗೆ ಈ ಕಥಾ ಸಂಕಲನದಲ್ಲಿ ಸಿದ್ಧಿಸಿದೆ. ಚೌಕಟ್ಟಿನಾಚೆಗೂ ಕತೆ ಜಿಗಿತವನ್ನು ಕಾಣುತ್ತವೆ, ಕಾಡುತ್ತವೆ.

₹150   ₹134

ಪ್ಯಾರಾನಾರ್ಮಲ್ | Paranormal

ತುಂಬ ಹಿಂದಿನಿಂದಲೂ ಅತಿಮಾನುಷತೆಯ ಬಗ್ಗೆ ಕತೆಗಳು ಇದ್ದವಾದರೂ ಆಗ ಸರಿಯಾದ ಸಾಕ್ಷಿಗಳಿಲ್ಲದೇ ಅವೆಲ್ಲವೂ ಕೇವಲ ಕತೆಗಳಾಗಿ ಉಳಿದು ಹೋಗಿದ್ದವು. ಆದರೆ ಈಗ ಹಾಗಲ್ಲ, ಪ್ಯಾರಾನಾರ್ಮಲ್ ಕ್ಷೇತ್ರವೆನ್ನುವುದು ಸಾಕಷ್ಟು ಬೆಳವಣಿಗೆ ಕಂಡಿದೆ. ತಾರ್ಕಿಕ ವಿಶ್ಲೇಷಣೆ, ಸಂಶೋಧನಾ ಸಾಮರ್ಥ್ಯ ಮತ್ತು ಅಧ್ಯಯನಗಳಿಂದಾಗಿ ಒಂದು ಕಾಲಕ್ಕೆ ಕೇವಲ ಭ್ರಮೆಯಷ್ಟೇ ಎನ್ನಿಸುವಂತಿದ್ದ ಕೆಲವು ವಿಷಯಗಳು ಈಗ, ಕೇವಲ ಭ್ರಮೆಯಲ್ಲ, ಭ್ರಮೆಯನ್ನು ಮೀರಿದ್ದು ಇನ್ನೇನೋ ಇದೆ ಎನ್ನುವ ಭಾವನೆಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿವೆ. ಸರಿಯಾಗಿ ಗಮನಿಸಿದರೆ ಪ್ಯಾರಾನಾರ್ಮಲ್ ಕ್ಷೇತ್ರ ಕೂಡ, ಸೈಕಾಲಜಿ, ಭೌತಶಾಸ್ತ್ರ ಪರಿಸರ ವಿಜ್ಞಾನ ಮತ್ತು ಮನುಷ್ಯ ಗ್ರಹಿಕೆಯ ಭಾಗವೇ ಎನ್ನುವುದು ಅರ್ಥವಾಗುವುದು ಕಷ್ಟವೇನಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ಈ ಬಗೆಯ ಓದು, ಓದುಗನ ಕಲ್ಪನಾ ಶಕ್ತಿಯನ್ನು ಒರೆಗೆ ಹಚ್ಚುತ್ತದೆ. ಓದುಗನ ಆಲೋಚನಾ ಶಕ್ತಿಯನ್ನು ವೃದ್ಧಿಸುತ್ತಲೇ ಈ ರೀತಿಯ ವಸ್ತುಗಳೆಡೆಗಿನ ಸಿನಿಕತನವನ್ನೂ ಸಹ ಕಡಿಮೆ ಮಾಡುತ್ತವೆ. ಹಾಗೆ ಮಾಡುವುದರ ಮೂಲಕ ಮುಕ್ತ ಮನಸ್ಸಿನಿಂದ ಈ ಕ್ಷೇತ್ರದ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಅನಾವಶ್ಯಕವಾಗಿ ಭಯ ಹುಟ್ಟಿಸುವ ವಿಷಯಗಳು ಅರಿವಿಗೆ ಸಿಕ್ಕುತ್ತವೆ. ಇಲ್ಲಿ ನಮ್ಮನ್ನೂ ಮೀರಿದ್ದು ಇನ್ನೇನೋ ಇದೆ ಎನ್ನುವುದು ಆರಿವಾಗಿ ಭಯ ಕಡಿಮೆಯಾಗಿ ಆತ್ಮ ವಿಶ್ವಾಸ ಹೆಚ್ಚುತ್ತದೆ ಎಂದರೂ ಅತಿಶಯೋಕ್ತಿಯಲ್ಲ.

₹175   ₹156

ಪ್ರಶಸ್ತಿ

nil

₹70   ₹62

ಪ್ರಶ್ನೆ/prashne

nil

₹100   ₹89

ಪ್ರಾಣಪಕ್ಷಿಯ ಅರಸುತ್ತಾ... | Pranapakshi Arasutta..

ಜಯಪ್ರಕಾಶ ಮಾವಿನಕುಳಿಯವರು ಸ್ವತಂತ್ರ ಭಾರತದಲ್ಲಿ ಚಡಪಡಿಸುತ್ತಿರುವ ಸೂಕ್ಷ ಸಂವೇದನೆಯ ವ್ಯಕ್ತಿಗಳ ಅಪಾರ ಸಂಕಷ್ಟಗಳನ್ನು ಸೃಜನಶೀಲತೆಯ ಧ್ವನಿಪೂರ್ಣವಾಗಿ ತಮ್ಮ ಅತ್ಯಂತ ಕಥೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಮಾನವೀಯ ಮೌಲ್ಯಗಳು ಸಮಾಜದಲ್ಲಿ ಅಧೋಗತಿಗೆ ಹೋಗುತ್ತಿರುವ ಬಗ್ಗೆ ಅಪಾರ ಸಿಟ್ಟು ಅವರ ಕಥೆಗಳಲ್ಲಿ ಹಾಸುಹೊಕ್ಕಿವೆ. ಅವರು ವರ್ತಮಾನದ ಸಂಗತಿಗಳನ್ನು ಹೇಳುತ್ತಲೇ ಭವಿಷ್ಯದ ಬೆಳಕಿನ ಬಗ್ಗೆ ಬರೆಯುತ್ತಾರೆ. ತಮ್ಮ ಪ್ರತಿಭಾ ಶೈಲಿಯ ಮೂಲಕ ಅವರು ತಮ್ಮ ಕಥೆಗಳಿಗೆ ಸ್ನಾಯುಶಕ್ತಿಯನ್ನು ತುಂಬಿದ್ದಾರೆ.

₹230   ₹205