'ರಾಜೀ'-ನಾಟಕವು ದಾಂಪತ್ಯದಲ್ಲಿ ಇರಬೇಕಾದ ನಿಷ್ಠೆಯನ್ನು ಪ್ರಶ್ನಿಸುವ ನಾಟಕ, ಸಂಭಾಷಣೆಗಳ ಸರಣಿಯಿಂದಲೇ ಗಟ್ಟಿತನವನ್ನು ಕಾಯ್ದುಕೊಂಡು ಬಂದಿದೆ. ರಾಜಿ ನೀಡುವ ಉತ್ತರಗಳು, ಒಟ್ಟು ಅವಳದ್ದಾಗದೆ ಒಟ್ಟು ಇಂತಹ ಸ್ತ್ರೀ ಜಗತ್ತಿನ ಪ್ರಾತಿನಿಧಿಕ ಮಾತಾಗುವಂತೆ ಅಕ್ಷತಾ ಎಚ್ಚರವಹಿಸಿದ್ದಾರೆ. ಇದಂತೂ ಭಾವದೊಂದಿಗೆ ಬುದ್ಧಿಯನ್ನು ಬೆಸೆಯುವ ಅಪೂರ್ವ ಪ್ರತಿಭೆ. 'ರಾಜೀ' ಪ್ರಕೃತಿ-ಪುರುಷ ಇಬ್ಬರನ್ನೂ ಚಿಂತನೆಗೆ ಹಚ್ಚುವ ಆಟ. (ನಾಟಕಕ್ಕೆ ಕನ್ನಡದಲ್ಲಿ 'ಆಟ' ಎನ್ನುತ್ತಾರೆ). ಅಕ್ಷತಾ ಈ 'ಆಟ'ವನ್ನು ಆರೋಗ್ಯಕರ ಮನಸ್ಸಿನಿಂದ ಆಡಿದ್ದಾರೆ. -ಡಾ. ಆನಂದ್ ಗೋಪಾಲ್ ಕತೆಗಾರರು ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕರು, ಮೈಸೂರು
nil
#
ಅನೇಕರು ನನ್ನಲ್ಲಿ ಭೂತ-ಪ್ರೇತ, ಪಿಶಾಚಿಗಳನ್ನು ಒಲಿಸಿಕೊಳ್ಳುವುದು ಹೇಗೆ? ಎಂದು ಕೇಳುತ್ತಾರೆ. ತಂತ್ರ-ಮಂತ್ರ ಸಾಧನೆಯನ್ನು ಪಡೆಯುವುದು ಹೇಗೆ? ಎಂದು ತಿಳಿಯಬಯಸುತ್ತಾರೆ. ಇವೆಲ್ಲವೂ ಸರಳ ಮತ್ತು ಸುಲಭ ಎಂದು ಅವರು ತಿಳಿದಿದ್ದಾರೆ. ಅಂಥವರಿಗೆ ನಾನು ಏನೆಂದು ಉತ್ತರಿಸಲಿ?... ಈ ಎಲ್ಲ ಸಿದ್ದಿಗಳು ಮತ್ತು ಈ ಎಲ್ಲ ಸಾಧನೆಗಳು ಎಲ್ಲರಿಗೂ ಸಾಧ್ಯವಿಲ್ಲ ಎಂದು ನಾನು ಹೇಗೆ ಹೇಳಲಿ?... ಎಲ್ಲವನ್ನೂ ಅವರು ಮಾಡಲಾರರು, ಎಲ್ಲರಿಗೂ ಅದು ಪ್ರಾಪ್ತಿಯಾಗುವುದಿಲ್ಲ ಎಂದು ಅವರಿಗೆ ತಿಳಿಸುವುದಾದರೂ ಹೇಗೆ?...
ಕನ್ನಡದಲ್ಲಿ ಹಲವು ಮಹನೀಯರು ವೃತ್ತಿ ಜೀವನದ ನೆನಪುಗಳನ್ನು ಬರೆದಿದ್ದಾರೆ. ಅವುಗಳ ಪೈಕಿ ನನಗೆ ಥಟ್ಟನೆ ನೆನಪಾಗುವುದು ಎಂ.ಆರ್. ಶ್ರೀನಿವಾಸಮೂರ್ತಿಯವರ `ರಂಗಣ್ಣನ ಕನಸಿನ ದಿನಗಳು', ನವರತ್ನರಾಮ್ ಬರೆದ `ಕೆಲವು ನೆನಪುಗಳು' ಮತ್ತು ಆಕಾಶವಾಣಿಯಲ್ಲಿ ಕಳೆದ `ಕಲಕತ್ತಾ ದಿನಗಳ' ಕುರಿತು ಜ್ಯೋತ್ಸ್ನಾ ಕಾಮತ್ ಕೃತಿ. ಇವೆಲ್ಲ ಸಾಹಿತ್ಯದ ವಿಶಿಷ್ಟ ಪ್ರಕಾರಗಳು. ದಿನದ ಹತ್ತು ಹನ್ನೆರಡು ಗಂಟೆಗಳನ್ನು ಮನೆಯಿಂದ ಹೊರಗೆ ಕಳೆಯುವಂತೆ ಮಾಡುವ ವೃತ್ತಿ ನಮಗೆ ಹೊಸ ಸವಾಲುಗಳನ್ನು ಒಡ್ಡುತ್ತದೆ, ಹೊಸ ಹೊಸ ಅನುಭವ ಮತ್ತು ಒಡನಾಟಗಳನ್ನು ಒದಗುವಂತೆ ಮಾಡುತ್ತದೆ. ಸಾಹಿತ್ಯದ ಮೂಲದ್ರವ್ಯ ಇದೇ ಆಗಿರುವುದರಿಂದ, ಈ ನೆನಪುಗಳಲ್ಲಿ ಕಥನದ ಕುತೂಹಲ ಮತ್ತು ಬದುಕಿನ ಆರ್ದ್ರತೆ ಎರಡೂ ಬೆರೆತಿರುತ್ತದೆ.ಪೂರ್ಣಿಮಾ ಮಾಳಗಿಮನಿ ಅವರ ವೃತ್ತಿ ಜೀವನ ಅವರನ್ನು ವಿಶಿಷ್ಟವಾಗಿ ರೂಪಿಸಿರುವ ಚಿತ್ರಣ ಈ ಕೃತಿಯಲ್ಲಿದೆ. ಪುಟ್ಟ ಹಳ್ಳಿಯಿಂದ ಬಂದ ಪೂರ್ಣಿಮಾ ನವೋದಯ ಶಾಲೆಯಲ್ಲಿ ಓದಿ, ಆಕಸ್ಮಿಕವಾಗಿ ವಾಯುಸೇನೆ ಸೇರಿಕೊಂಡು, ತನಗೆ ಅಪರಿಚಿತವಾದ ಜಗತ್ತಿನಲ್ಲಿ ಅಡ್ಡಾಡಿದ ಪ್ರಸಂಗಗಳು ಈ ನೆನಪುಗಳ ಬುತ್ತಿಯಲ್ಲಿವೆ. ತಮಾಷೆ, ಭಾವುಕತೆ, ದಿಟ್ಟತನ ಮತ್ತು ಬೆರಗು ಹಾಸುಹೊಕ್ಕಾಗಿರುವ ಈ ಕಥನದಲ್ಲಿ ನಡೆದುಬಂದ ದಾರಿಯ ಹೆಜ್ಜೆಗುರುತುಗಳಿವೆ. ಸಹಜ ಕುತೂಹಲದಿಂದ ಓದಿಸಿಕೊಳ್ಳುವ ಕೃತಿ ಇದು. – ಜೋಗಿ
Showing 331 to 360 of 4929 results