#
nil
ಅವರು ನಮ್ಮ ಒಗ್ಗಟ್ಟನ್ನು ಮುರಿಯಲು ಸುಲಭ ದಾರಿ ಕಂಡುಕೊಂಡಿದ್ದಾರೆ. ಅದು ಸಿಂಪಲ್ ದಾರಿ. ನಮಗೂ ಗೊತ್ತಿರುವ ದಾರಿ! ಆದರೂ ನಾವು ಎಚ್ಚೆತ್ತುಕೊಂಡಿಲ್ಲ! ಒಮ್ಮೆ ಧರ್ಮ, ಇನ್ನೊಮ್ಮೆ ಜಾತಿ, ಮತ್ತೊಮ್ಮೆ ಲಿಂಗ, ಮಗದೊಮ್ಮೆ ಬಣ್ಣ ಹೀಗೆ ಒಂದಲ್ಲ ಒಂದು ಬಾಂಬುಗಳನ್ನು ನಮ್ಮ ನಡುವೆ ತಂದಿಡುತ್ತಲೇ ಇರುತ್ತಾರೆ. ಆ ಬಾಂಬಿಗೆ ಸಿಡಿಯುವ ಶಕ್ತಿ ಇದೆಯಾ? ಸಿಡಿದರೆ ಎಷ್ಟು ಜನ ಆಹುತಿಯಾಗಬಹುದು? ಆ ಬಾಂಬನ್ನು ನಿಷ್ಕ್ರಿಯಗೊಳಿಸುವ ದಾರಿ ಯಾವುದು? ಎಂಬ ಸಣ್ಣಪುಟ್ಟ ಆಲೋಚನೆಗಳೂ ನಮ್ಮ ಮನಸ್ಸನ್ನು ಕದಡುವುದಿಲ್ಲ. ಹೊರತಾಗಿ ಬಾಂಬಿನ ಬಗ್ಗೆ ಹರಡುವ ಊಹಾಪೋಹಗಳಿಗೆ ಕಿವಿ ಕೊಡುತ್ತೇವೆ. ಕೇಳಿದ್ದೆಲ್ಲಾ ಸತ್ಯ ಅನ್ನುವಹಾಗೆ ಒಂದಷ್ಟು ದಿನ ಹಾರಾಡುತ್ತೇವೆ. ಅಲ್ಲಿಗೆ ಇನ್ನೊಂದು ಹೊಸ ಬಾಂಬು ಬಂದು ಬೀಳುತ್ತದೆ. ನಮ್ಮ ಚಿತ್ತ ಅತ್ತ ಹಾಯುತ್ತದೆ. ಹೀಗೇ ನಮ್ಮನ್ನು ಈ ಬಾಂಬುಗಳು ಸದಾ ಬ್ಯುಸಿಯಾಗಿರುವಂತೆ ಮಾಡುತ್ತವೆ. ನಮ್ಮ ಸಮಯ, ಹಣ, ತಕ್ತಿ, ಸೃಜನಶೀಲತೆ ಎಲ್ಲವೂ ಹಾಳಾಗುವುದು ಹೀಗೇ.. ಹಾಗಾದರೆ ಈ ಎಲ್ಲವನ್ನು ಬಳಸಿಕೊಂಡು ರ‍್ಯಾಂಬೊ ಏನು ಮಾಡುತ್ತಾನೆ? ಅಕ್ರಮಣ ಮಾಡುತ್ತಾನೆ!
ಕಥೆಗಳು ನಮ್ಮ ಅಂಗಳದಲ್ಲಿಯೇ ಇರುತ್ತದೆ. ಅದನ್ನು ಕೇಳುವ ಕಿವಿಗಳು, ನೋಡುವ ಕಣ್ಣುಗಳು ಕಥೆಗಾರನದಾಗಿರಬೇಕು. ಅಂದರೆ ಕಥೆಗಳು ಜನರ ನಡುವೆಯೇ ಹುಟ್ಟಬೇಕು. ಆಗಲೇ ಅದು ಓದುಗರ ಮನಸ್ಸು ತಟ್ಟಲು ಸಾಧ್ಯ. ಕಲ್ಪನೆಯ, ಪೆಂಟಾಸಿಯ ಕಥೆಗಳು ರಂಜಿಸುತ್ತವೆ. ಆದರೆ ಮನಸ್ಸಿನ ಆಳಕ್ಕೆ ತಿಳಿಯುವುದು ಕಷ್ಟ. ರಂಜನೆ ಒಂದು ಕಥಾಂಶವಾದರೆ ಹೆಚ್ಚಿನದು ಬದುಕಿನ ವಿಸ್ತಾರವನ್ನು ಹೆಚ್ಚಿಸುವ ಕಲೆಗಾರಿಕೆ ಆಗಿರಬೇಕು. ಸರಳವಾಗಿ, ಸಂದೇಶವನ್ನ ಅದು ಹೊತ್ತಿರಬೇಕು. ಹಾಗೆಯೇ ಹಲವು ಅರ್ಥಗಳನ್ನು ಹೊಮ್ಮಿಸುವಂತಾಗಬೇಕು. ಒಟ್ಟಿನಲ್ಲಿ ರಂಜನೆಯ ಜೊತೆಗೆ ಓದುಗನ ಬೆಳವಣಿಗೆಗೆ ಕಥೆಗಳು ಸಹಕಾರಿಯಾಗಿರಬೇಕು. ಶ್ರೀಮತಿ ಸತ್ಯವತಿ ಮೂರ್ತಿಯವರ ಕಥೆಗಳು ಈ ಅಂಶಗಳನ್ನು ಸಮೃದ್ಧವಾಗಿ ಒಳಗೊಂಡಿದೆ. ಓದಿಸಿಕೊಂಡು ಹೋಗುವ ಬರಹ, ಕಲಾತ್ಮಕವಾಗಿ ಕೂಡಿಕೊಂಡ ಪದ, ವಾಕ್ಯ ಪುಂಜಗಳು. ಆಸಕ್ತಿ ಹುಚ್ಛಿಸುವ ಘಟನಾವಳಿಗಳು, ಚಿಂತಿಸುವ ಅಂಶಗಳು... ಹೀಗೆ ಸುಪುಷ್ಟವಾದ ಕಥೆಗಳು ಅವರದು. ಡಾ.ಸತ್ಯವತಿ ಮೂರ್ತಿ
ಸಂಪಟೂರು ವಿಶ್ವನಾಥ್
Showing 361 to 390 of 4929 results