ಹಾವು ಏಣಿ ಆಟ ಒಂದು ವಿಶಿಷ್ಟ ಕಥಾವಸ್ತು ಹೊಂದಿರುವ ಕಾದಂಬರಿ. ಕನ್ನಡ ಕಾದಂಬರಿ ಲೋಕದಲ್ಲಿ ಒಂದು ಹೊಸ ಪ್ರಯತ್ನ. ಇದೊಂದು "ಮೆಡಿಕೋ ಲೀಗಲ್ ಡ್ರಿಲ್ಲರ್" ಔಷಧ ವಿಜ್ಞಾನದ ಪರ ಮತ್ತು ವಿರುದ್ಧದ ಕಾನೂನಿನ ಹೋರಾಟದ ಕಥೆ. ಈ ಕಾದಂಬರಿಯಲ್ಲಿ ಒಂದು ಕೊಲೆಯ ತನಿಖೆಯಿದೆ. ಅದರ ಹಿಂದಿರುವ ಭಯಾನಕ ಸತ್ಯದ ಅನಾವರಣವಿದೆ. ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಅವ್ಯಕ್ತವಾಗಿ ಪ್ರವೇಶಿಸಿ, ನಮ್ಮ ಜೀವದ ಜೀವದ ಜೊತೆ, ಜೀವನದ ಜೊತೆ ಆಟವಾಡುವ ಫಾರ್ಮಾ ಲಾಬಿಯ ದುರಾಸೆಯಿದೆ. ಇದರ ಮಧ್ಯೆ ಅರಿತೊ ಅರಿಯದೆಯೋ ನಲುಗುವ ಜನರ ನೋವಿದೆ. ಆ ನೋವನ್ನೇ ಬಂಡವಾಳ ಮಾಡಿಕೊಳ್ಳುವ ಸ್ವಾರ್ಥವಿದೆ. ಇವೆಲ್ಲದರ ವಿರುದ್ಧ ಕೋರ್ಟ್ನಲ್ಲಿ ನಡೆಸುವ ಹೋರಾಟವಿದೆ. ಸತ್ಯ ಅನ್ನುವುದು ನಮ್ಮ ನಮ್ಮ ದೃಷ್ಟಿಕೋನವಷ್ಟೇ. ನಮ್ಮ ಕಣ್ಣಿಗೆ ಕಂಡಿದ್ದು, ನಾವು ತಿಳಿದಿರುವುದು ಅಥವಾ ನಾವು ತಿಳಿಯಲೆಂದೇ ಕೊಡುವ ಮಾಹಿತಿಗಳು ಮಾತ್ರವೇ ಸತ್ಯವಲ್ಲ. ಒಮ್ಮೆ ಶೋಧಿಸಲು ಮುಂದಾದಾಗ ಆ ಸತ್ಯದ ಪರದೆಯ ಹಿಂದೆ ಅಡಗಿರುವ ಇನ್ನೊಂದು ಸತ್ಯ ನಮ್ಮ ಮುಂದೆ ಧುತ್ತನೆ ಬಂದು ನಿಂತಾಗ ಅದು ನಮ್ಮ ನಂಬಿಕೆಯ ಬುನಾದಿಯನ್ನೇ ಅಲುಗಾಡಿಸಿ ಯಾರು ಸರಿ ಯಾರು ತಪ್ಪು ಎನ್ನುವ ಪ್ರಶ್ನೆ ಹುಟ್ಟಿಹಾಕುತ್ತದೆ.
nil
ಸಂಪಟೂರು ವಿಶ್ವನಾಥ್
ರಾಮಿ
#
##
ಎಂಟನೇ ದರ್ಜೆಯ ನಾಗರಿಕರಾಗಿಯೇ ಮುಂದುವರಿಯುತ್ತಾರೆ ಎಂಬುದನ್ನು ಪ್ರಬಲವಾಗಿ ತೋರಿಸಿದ್ದಾರೆ; ಓದುಗರ ಹೃದಯ ಮತ್ತು ಮನಸ್ಸನ್ನು ಜಾಗೃತಗೊಳಿಸುವ ಭರವಸೆ ಇದೆ. ಓದಲೇ ಬೇಕಾದ ಪುಸ್ತಕ. -ಜೆ. ಸಾಯಿ ದೀಪಕ್ ವಕೀಲರುHindu
ಸಣ್ಣ ಸಣ್ಣ ಸಂಗತಿಗಳನ್ನು ಸಾಂದ್ರವಾಗಿ ಭಾವಪೂರ್ಣವಾಗಿಸುವ ಇಲ್ಲಿನ ಕಥೆಗಳು; ಚಂದದ ಬದುಕೊಂದಕ್ಕಾಗಿ ಹಂಬಲಿಸಿದಂತಿವೆ. ಹಿನ್ನೀರದಂಡೆಯಿಂದ ಮಹಾನಗರದ ಮಧ್ಯಕ್ಕೆ ತಂದು ನಿಲ್ಲಿಸಿದ ಕಥೆಗಾರ್ತಿಯ ಜೀವನಾನುಭವಗಳೇ ಕಥೆೆಗಳ ಹೂರಣವೆನಿಸುತ್ತದೆ. ಸಮಕಾಲೀನ ಸಂದಿಗ್ಧತೆಗಳ ಸೂಕ್ಷö್ಮ ಪದರುಗಳನ್ನು ಸಾವಧಾನದಿಂದ ಕಂಡರಸುವ ಕತೆಗಳು; ವಾಸ್ತವವನ್ನು ತದೇಕಚಿತ್ತದಿಂದ ದಿಟ್ಟಿಸಿವೆ. ಹೆಣ್ಣಿನ ಒಳತೋಟಿಗಳು ಆಧುನಿಕ ಅವಸ್ಥಾಂತರದ ಗರಡಿಯಲ್ಲಿ ಪಳಗಿ ಗಟ್ಟಿಪಾತ್ರಗಳಾಗಿ ಅರಳಿ ಹೊರಳಿವೆ. ಕನ್ನಡ ಕಥಾಲೋಕಕ್ಕೆ ಸೇರ್ಪಡೆಯಾಗಲೇಬೇಕಾದ ಕಥೆಗಳಿವು ಎನಿಸುತ್ತದೆ. - ಡಾ. ರತ್ನಾಕರ ಸಿ.ಕುನುಗೋಡು ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಿಪ್ಪನಪೇಟೆ
Showing 4681 to 4710 of 4805 results