nil
ಸಮುದ್ಯತಾ ಅವರ ಮೊದಲ ಕಾದಂಬರಿ ‘ಇದೆ ಎಂದರೆ ಇದೆ ಇಲ್ಲ ಎಂದರೆ ಇಲ್ಲ’ ಹಳ್ಳಿಯ ಮಧ್ಯಮ ವರ್ಗದ ಕುಟುಂಬವೊಂದರ ಸ್ತ್ರೀಯರ ಬಹುಸ್ತರೀಯ ಸಂಕಟವನ್ನು ಮುಖ್ಯವಾಗಿ ಕೇಂದ್ರೀಕರಿಸಿ ನಿರೂಪಿಸುತ್ತದೆ. ಮನೆತನದ ಬದುಕಿನ ಏಳು ಬೀಳಿನ ಗತಿಬಿಂಬ ನಾಲ್ಕು ತಲೆಮಾರುಗಳನ್ನು ಹಾದು ಸುಮಾರು ಒಂದು ಶತಮಾನವನ್ನು ವ್ಯಾಪಿಸುತ್ತದೆ… ಕುಟುಂಬದ ದೈನಿಕ ಅನುಭವದ ವಾಸ್ತವಿಕ ವಿವರಗಳನ್ನು ನೇಯುವ ಈ ಕೃತಿಯನ್ನು ಹವ್ಯಕ ಸಮುದಾಯದ ಸಾಂಸ್ಕೃತಿಕ ದಾಖಲೆಯಾಗಿ ಓದಬಹುದಾಗಿದೆ… ಕಷ್ಟಗಳು ಯಾವ ರೂಪ ಮತ್ತು ಮೂಲದಿಂದ ಬಂದರೂ ಅವುಗಳನ್ನು ಅನುಭವಿಸುವವಳು ಹೆಣ್ಣು ಎಂಬ ಆಶಯ ಕಾದಂಬರಿಯುದ್ದಕ್ಕೂ ಪುನರಾವರ್ತನೆಯಾಗುತ್ತದೆ… ಸಂಸಾರ ಸುಸೂತ್ರ ಸಾಗದಿರುವುದಕ್ಕೆ ಕಾದಂಬರಿ ಸೂಚಿಸುವ ಮೂಲ ಕಾರಣವಾದರೂ ಯಾವುದು? ಮುಳುಗಡೆಯಂಥ ಪ್ರಾಕೃತಿಕ ವಿಪತ್ತೆ? ಮನುಷ್ಯ ಮಾಡುವ ಆಯ್ಕೆಗಳೆ? ಕಂದಾಚಾರಗಳೆ? ಗುಟ್ಟು ಬಿಟ್ಟು ಕೊಡದ ಕಾಲವೆ? ಕೈಮೀರಿದ ಅಸಹಾಯಕತೆಗೆ ಇನ್ನೊಂದು ಹೆಸರಾದ ಕೈಕೊಟ್ಟ ದೈವವೆ? ದುರ್ಬಲ ಪುರುಷರೆ? ಇಂಥ ತಾತ್ವಿಕ ಪ್ರಶ್ನೆಗಳಿಗೆ ಉತ್ತರಿಸುವ ಆಸಕ್ತಿಯನ್ನು ಕಾದಂಬರಿ ಓದುಗರಿಗೆ ಬಿಡುತ್ತದೆ. ಶ್ರೀಧರ ಬಳಗಾರ
#
ಎಚ್.ಎಸ್. ರಾಘವೇಂದ್ರ
'ಇಲ್ಲಿಂದ ಮುಂದೆಲ್ಲ ಕಥೆ' ಇತ್ತೀಚಿನ ಕೆಲವು ವರ್ಷಗಳಲ್ಲಿ ಕನ್ನಡ ಕಥಾಲೋಕದ ಚಾಚುಗಳ ಅತ್ಯುತ್ತಮ ಮಾದರಿಯಾಗಿದೆ. ಈ ಪ್ರಯತ್ನಕ್ಕೆ ಹುಡುಕಾಟಕ್ಕೆ ಎರಡು ಲಕ್ಷಣಗಳಿವೆ. ಒಂದು, ತಾತ್ವಿಕವಾಗಿ ಮತ್ತು ತಾಂತ್ರಿಕವಾಗಿ ಈ ತನಕದ ಕನ್ನಡ ಕಥಾಪರಂಪರೆಯ ಧಾತುಗಳನ್ನೆಲ್ಲ ಒಳಗೊಳ್ಳುವ ಹಂಬಲ ಮತ್ತೊಂದು, ಮಾನುಷಲೋಕವನ್ನು ಕರಾರುಗಳಿಲ್ಲದೆ ಒಳಗೊಳ್ಳುವ ತವಕ ಕಥೆಗಾರರಾಗಿ ಮೊದಲ ಸಂಕಲನದಿಂದಲೂ ರಘುನಾಥರು ಉಳಿಸಿಕೊಂಡು ಬಂದಿರುವ ಉತ್ಕಟತೆ ಮತ್ತು ತನ್ಮಯತೆ ಅವರನ್ನು ಕನ್ನಡದ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರನ್ನಾಗಿಸಿವೆ. ಪ್ರತಿಭೆಯ ಜೊತೆಗೆ ಬರವಣಿಗೆಯಲ್ಲಿ ಅವಸರ ತೋರಿಸದೇ ಇವರು ಕಾಯ್ದುಕೊಂಡು ಬಂದಿರುವ ಸಂಯಮದ ಪಾತ್ರವೂ ದೊಡ್ಡದು. ರಘುನಾಥರ ಬರವಣಿಗೆಯ ಬಗ್ಗೆ ವ್ಯಕ್ತಿತ್ವದ ಬಗ್ಗೆ ನನಗೆ ಸಕಾರಣವಾದ ಮೆಚ್ಚುಗೆ. ಅವರ ಸಾಹಿತ್ಯಕ ಸಂವೇದನೆ ಮತ್ತು ಸಾಂಸ್ಕೃತಿಕ ಎಚ್ಚರ ಇದಕ್ಕೆ ಮುಖ್ಯ ಕಾರಣ, ಇತ್ತೀಚಿನ ದಿನಗಳಲ್ಲಿ ಸಮಕಾಲೀನ ಬೆಳವಣಿಗೆಗಳನ್ನು ಕುರಿತ ಅವರ ಪ್ರತಿಕ್ರಿಯೆಗಳ ಸ್ಪಷ್ಟತೆ ಮತ್ತು ನಿರ್ಭಯವಾದ ಮಾತುಗಳು ಎರಡೂ ಅವರ ಮೇಲಿನ ಭರವಸೆ ಮತ್ತು ಗೌರವವನ್ನು ಹೆಚ್ಚಿಸುತ್ತಿವೆ.
ವಿವೇಕ್ ಶಾನಭಾಗ್
Showing 541 to 570 of 4939 results