ಟಿ ಎಂ ಈಶ್ವರ್ ಸಿಂಗ್
ಟಿ ಶ್ರೀನಿವಾಸ
ಬಸವರಾಜ್ ಹಳ್ಳೂರ್ ಕಲಕೇರಿ
nil
ಕರ್ನಾಟಕ ಅಗ್ನಿವಂಶ ಕ್ಷತ್ರಿಯರು ಎಂಬ ಕೃತಿಯನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಕೆಂಜಗನಹಳ್ಳಿಯ ಶ್ರೀ ಮದುಸೂಧನ್ ಕೆ ಆರ್ ಅವರು ಬರೆದಿದ್ದು ಅಗ್ನಿವಂಶ ಕ್ಷತ್ರಿಯರ ಬಗ್ಗೆ ನಾನಾ ಮೂಲಗಳಿಂದ ವಿವರಗಳನ್ನು ಸಂಗ್ರಹಿಸಿದ್ದಾರೆ. ಭಾರತದಾದ್ಯಂತ ಅಗ್ನಿಯಿಂದ ನಿಷ್ಪನ್ನರಾದವರೆಂದು ಹೇಳಿಕೊಳ್ಳುವ ಅನೇಕ ಗುಂಪುಗಳಿವೆ. ಭಾರತದಲ್ಲಿ ಅಳ್ವಿಕೆ ನಡೆಸಿದ ಹಿಂದೂ ರಾಜರನ್ನು ಸಾಮಾನ್ಯವಾಗಿ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಚಂದ್ರವಂಶ' ಇನ್ನೊಂದು ಸೂರ್ಯವಂಶ', ಅಗ್ನಿವಂಶವು ಇವೆರಡರಲ್ಲಿಯೂ ಸೇರಿದೆ. ಚಂದ್ರವಂಶದವರು ಪ್ರಮುಖವಾಗಿ ಯಾದವರು ಯಾದವ ಮೂಲದಿಂದ ಬಂದವರು. ಕರ್ನಾಟಕ, ಮಹಾರಾಷ್ಟ್ರ, ಗುಜರಾತನ್ನು ಆಳಿದ ಬಹುತೇಕ ಅರಸು ಮನೆತನಗಳಿಗೆ ಮೂಲ ಪುರುಷ ಯದುರಾಯನಾಗಿದ್ದಾನೆ. ಯಾದವರ ಮೂಲ ಪುರುಷನೂ ಯದುವೇ. ಹೊಯ್ಸಳರು, ದೇವಗಿರಿ ಯಾದವರು, ಕಾಕತೀಯ ಅರಸರು, ವಿಜಯನಗರದ ಅರಸರು, ಕೊನೆಗೆ ಮೈಸೂರು ಅರಸರು ತಮ್ಮ ಮೂಲವನ್ನು ಯಧು ವಿನಿಂದಲೇ ಪ್ರಾರಂಭಿಸಿದ್ದಾರೆ. ಸೂರ್ಯವಂಶ ಅಥವಾ ಇನಾಕುಲ ಅಥವಾ ರವಿಕುಲದ ಮೂಲವನ್ನು ಹೇಳುವ ವಂಶಗಳಿಗೆ ಮೂಲ ಸೂರ್ಯ. ಇವನ ವಂಶದಲ್ಲಿ ಬಂದವನು ದಿಲೀಪ, ಕರ್ನಾಟಕದ ಕದಂಬರು, ಆಂಧ್ರದ ಇಕ್ಷಾಕುಗಳು. ತೆಲುಗು ಜೋಳ ಮನೆತನ ಮೊದಲಾದವರು ತಮ್ಮನ್ನು ಸೂರ್ಯ ಅಥವಾ ರವಿಕುಲಕ್ಕೆ ಸೇರಿದವರೆಂದು ಹೇಳಿಕೊಂಡಿದ್ದಾರೆ. ಮಧುಸೂಧನ್ ಅವರು ಇನ್ನೂ ಅನೇಕ ರಾಜವಂಶಗಳನ್ನು ಈ ಪಟ್ಟಿಯಲ್ಲಿ ಸೇರಿಸಿದ್ದಾರೆ. ಕರ್ನಾಟಕ ಜಾತಿಗಳಲ್ಲಿ ಒಂದು ಸಣ್ಣ ಗುಂಪಾದ ಅಗ್ನಿವಂಶ ಕ್ಷತ್ರಿಯರ ಬಗ್ಗೆ ಮಾಹಿತಿ ಕಲೆಹಾಕಿ ಆ ಜಾತಿಯ ಆಚರಣೆಗಳ ಬಗ್ಗೆ ಹೊರ ಪ್ರಪಂಚಕ್ಕೆ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸುತ್ತಿರುವ ಮಧುಸೂಧನ್ ಅವರ ಪ್ರಯತ್ನಕ್ಕೆ ಯಶಸ್ಸು ದೊರೆಯಲೆಂದು ಹಾರೈಸುತ್ತೇನೆ.
#
'ನಮ್ಮ ಬದುಕಿನಲ್ಲಿ ನಾಲ್ಕು ಜನರಿಗೆ ಒಳ್ಳೆಯದು ಮಾಡಬೇಕು, ನಮ್ಮ ಬದುಕು ಹಾಗೆಯೇ ರೂಪುಗೊಳ್ಳಬೇಕು' ಎಂದು ಹಿರಿಯರು ಸದಾ ಹೇಳುವ ಮಾತುಗಳು. ಆದರೆ ದೇವಿಕಾ ನಾಲ್ಕು ಜನರಿಗೆ ಒಳ್ಳೆಯದು ಮಾಡಬೇಕು ಎಂಬ ವಿಚಾರವನ್ನು ಘಂಟಾಘೋಷವಾಗಿ ಹೇಳುತ್ತ ಭಾಷಣವನ್ನೇನೂ ಬಿಗಿಯುವುದಿಲ್ಲ. ಬದಲಿಗೆ ಈ ಆಶಯವು ತಮ್ಮ ಅಂತರಂಗದಲ್ಲಿ ಸದಾ ಹಸಿರಾಗಿರುವಂತೆ ನೋಡಿಕೊಂಡವರು. ಈ ಅರಿವು ತೆಳುವಾಗಿ ನನ್ನ ಮನದಲ್ಲಿ ಮೂಡಿದ್ದರೂ, ಅವರ ಲೇಖನಗಳನ್ನು ಓದುತ್ತ ಹೋದಂತೆ ಅವರ ಅಂತರಂಗದ ಆಶಯವನ್ನು ಓದುವ ಅವಕಾಶವೊ೦ದು ನನಗೆ ದೊರೆತಂತಾಯಿತು.
ಕರ್ಣನಿಗೆ ಪೂರ್ವ ಜನ್ಮದಲ್ಲಿ ಸಹಸ್ರ ಕವಚಗಳಿದ್ದುವೆಂದೂ, ಅದನ್ನು ನರ ಮತ್ತು ನಾರಾಯಣರೆಂಬ ಋಷಿಗಳು ಯುದ್ಧದಲ್ಲಿ ಕತ್ತರಿಸುತ್ತ ಬಂದರೆಂಬುದು ಕಥೆ. ಅವುಗಳಲ್ಲಿ ಒಂದು ಕವಚ ಉಳಿದು ಬಂತು. ಅದನ್ನು ಕತ್ತರಿಸುವುದಕ್ಕಾಗಿ ಕೃಷ್ಣಾರ್ಜುನರು ಈ ಜನ್ಮದಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲ, ಜೀವನೊಬ್ಬನಿಗೆ ಅನೇಕ ಕವಚಗಳು, ಕರ್ಣನಂತೆ. ಅವುಗಳನ್ನು ಕಳೆದುಕೊಳ್ಳುತ್ತ, ಕಳೆದುಕೊಳ್ಳುತ್ತ ಸಾಗುವುದೇ ಅವನ ಪಾಡು. ಆ ಕವಚಗಳು ಲೋಹದ ಕವಚಗಳಲ್ಲ. ಕವಚ ಸಾಂಕೇತಿಕ ಅಷ್ಟೇ. ಕರ್ಣನ ಬದುಕೂ ಈ ಕವಚಗಳನ್ನು ಕಳೆದುಕೊಳ್ಳುವ ಪ್ರಕ್ರಿಯೆ. ಅದನ್ನೇ ಕಾದಂಬರಿಯೂ ಧ್ವನಿಸುತ್ತದೆ..
Showing 721 to 750 of 3497 results