#
nil
'ಶತಮಾನಂಭವತಿ' ಅನ್ನೋದು ನೂರು ವರ್ಷ ಚೆನ್ನಾಗಿ ಬಾಳಲಿ ಎಂದು ಆಶೀರ್ವದಿಸುವ ಮಂತ್ರ. ಈ ಮಂತ್ರದ ಆಶಯವೇ ಕಾದಂಬರಿಯ ತಲೆಬರಹ, ಈ ಆಶಯದಂತೆ ರಘು ಅನ್ನುವ ಪ್ರಮುಖ ಪಾತ್ರದಾರಿ ಪರಿಶುದ್ಧ ಪ್ರೀತಿಗಾಗಿ ಹಪಾಹಪಿಸುತ್ತಾನೆ ಜೊತೆಗೆ ಆ ಪ್ರೀತಿಯನ್ನ ಗಳಿಸಿ ಜೀವನ ಪೂರ್ತಿ ಕಾಪಿಟ್ಟುಕೊಳ್ಳುವ ಉದ್ದೇಶವನ್ನು ಸಹ ಇಟ್ಟುಕೊಂಡಿರುತ್ತಾನೆ. ಅಷ್ಟೇ ಅಲ್ಲ ಅಂತಹ ಪ್ರೀತಿ ಪಡೆಯಲು ಪರಿಶುದ್ಧನಾಗೇ ಈತನು ಇರುತ್ತಾನೆ. ಮ್ಯಾಟ್ರಿಮೊನಿಯಲ್ ಅನ್ನೋದು ಮದುವೆ ಮಾಡಸಲಿಕ್ಕೆ ಇರುವ ಆನ್ ಲೈನ್ ವೆಬ್ ಸೈಟ್, ಈ ಆನ್ ಲೈನ್ ಪೇಜ್ ಗೆ ಮದುವೆಯಾಗುವ ಹುಡುಗಿಯ ತಲಾತ್ ಮಾಡಲು ನೋಂದಾಯಿಸಿಕೊಳ್ಳುವ ಕಥಾನಾಯಕ ರಘು ಪ್ರೊಫೈಲ್ ಮೂಲಕ ಪರಿಚಯ ಆಗುವ ಹುಡುಗಿ ಜೊತೆಯಲ್ಲಿ ಚಾಟ್ ಆರಂಭಿಸಿದ ನಂತರ ಅವಳೆಡೆಗೆ ಅನುರಾಗ ತೋರಿ ಆ ನಂತರ ಅವಳು ಸಿಗದೆ ಮೋಸಕ್ಕೆ ಒಳಗಾಗುತ್ತಾನಾ? ಅಥವಾ ಅವನಿಗೆ ಅವಳ ಪ್ರೀತಿ ಧಕ್ಕುತ್ತಾ? ಅನ್ನುವ ಹುಡುಕಾಟದಲ್ಲಿರುವ ನಮಗೆ, ಅದೇ ವಂಚನೆ ಮೋಸದ ಕಾರಣಗಳಿಂದ ಮತ್ತೆ ಹೇಗೆ ಅತ ಪ್ರೀತಿಯನ್ನ ಗಳಿಸುತ್ತಾನೆ ಅನ್ನುವ ಕಥಾ ಹೂರಣ ಇರುವ ಕಾದಂಬರಿ ಶತಮಾನಂಭವತಿ, ಕಾದಂಬರಿಯ ಅಂತ್ಯದಲ್ಲಿ ಹೇಳುವ ವಿಷಯವನ್ನ ನಮಗೆ ಗೊತ್ತಿಲ್ಲದಂತೆ ಮೊದಲಿಂದಲೂ ಬೆಸೆದುಕೊಂಡೆ ಬಂದಿರುತ್ತಾರೆ. ಅದೇ ಈ ಕಾದಂಬರಿಯ ಹೆಗ್ಗುರುತು. ಕಾದಂಬರಿಕಾರ ರಾಜಶೇಖರ್ ಮೂಲತಃ ಸಿನೆಮಾ ನಿರ್ದೇಶನ ಮಾಡಲು ಬಂದಾತ. ಆ ರಂಗದಲ್ಲಿ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಕೆಲಸ ಮಾಡಿ ಸದಭಿರುಚಿಯ ಹಾಗೂ ಹೊಸತನ ಇರುವ ಸಿನೆಮಾ ಕೊಡಬೇಕೆಂಬ ಸದಾ ಇಚ್ಚೆಯುಳ್ಳ ವ್ಯಕ್ತಿ, ವರ್ತಮಾನದ ಹದಿಹರೆಯದ ಪ್ರೀತಿ, ಪ್ರೇಮ ತಲ್ಲಣಗಳನ್ನ ಹೊಸತನದ ಹಚ್ಚಿಗೆ ಹಾಕಿ ಚೆಂದದ ರೂಪಗಳನ್ನ ಕೊಟ್ಟಿದ್ದಾರೆ. ಇದನ್ನ ಓದುತ್ತಿರುವಾಗಲೇ ಒಂದು ಸಿನೆಮಾ ನೋಡಿದ ಅನುಭವವಾಗುತ್ತದೆ, ಅಂದರೆ ಆ ರೀತಿಯಲ್ಲಿ ಕಾದಂಬರಿಕಾರರು ಸಾಹಿತ್ಯ ಕಟ್ಟಿಕೊಟ್ಟಿದ್ದಾರೆ. ಇದು ಅವರ ಚೊಚ್ಚಲ ಕೃತಿ, ಮುಂದೆ ಏನಾಗಬಹುದು ಅನ್ನುವ ಕುತೂಹಲಗಳ ನಡುವೆ ಕಾದಂಬರಿ ಓದಿಸಿಕೊಂಡು ಹೋಗುತ್ತದೆ. ಒಳ್ಳೆಯ ಬರಹಗಾರರಾಗುವ ಕುರುಹುಗಳನ್ನ ಈ ಪುಸ್ತಕದ ಮೂಲಕ ಮಿತ್ರರು ನೀಡಿದ್ದಾರೆ. ಓದುಗರು ಅರೆಕೊರೆಗಳನ್ನ ಮನ್ನಿಸಿ ಸ್ವೀಕರಿಸಿ ಪ್ರೋತ್ಸಾಹಿಸಲಿ ಅನ್ನುವ ಸದಾಶಯ. ರಾಜು ಸೂನಗಹಳ್ಳಿ ಬರಹಗಾರ, ಚಲನಚಿತ್ರ ನಿರ್ದೇಶಕ
ವಾಲ್ಮೀಕಿ ರಾಮಾಯಣದಲ್ಲಿ ಶತ್ರುಘ್ನನ ಪಾತ್ರ ಅಷ್ಟೊಂದು ಮಹತ್ವವನ್ನು ಪಡೆದಿಲ್ಲ. ರಾಮನ ಕಡೆಯ ತಮ್ಮನಾಗಿ, ರಾಮಲಕ್ಷ್ಮಣರು ಕಾಡಿಗೆ ಹೋದ ಮೇಲೆ, ಭರತ ನಂದಿಗ್ರಾಮದಲ್ಲಿ ನಿಂತಮೇಲೆ ಅನಿವಾರ್ಯವಾಗಿ ಆಯೋಧ್ಯೆಯ ಆಡಳಿತವನ್ನು ನಿರ್ವಹಿಸಿದನೆಂಬಷ್ಟು ಮಾತ್ರ ವಿವರ ಅಲ್ಲಿ ದೊರೆಯುತ್ತದೆ. ಆದರೆ ಸಹೋದರ ಶ್ರೀ ಪ್ರದೀಪ್ ಬೇಲೂರು ಅವರು ಮಹಾಕಾವ್ಯದಲ್ಲಿ ಮರೆಯಾದ ಶತ್ರುಘ್ನನ ವ್ಯಕ್ತಿತ್ವದ ಚಿತ್ರಣವನ್ನು ತಮ್ಮ ಈ 'ಶತ್ರುಘ್ನ' ಕಾದಂಬರಿಯಲ್ಲಿ ಆದಷ್ಟು ಸಮರ್ಥವಾಗಿಯೂ, ಪ್ರಾಮಾಣಿಕವಾಗಿಯೂ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಶತ್ರುಘ್ನನ ಅಂತರಂಗದ ಒಳಹೊಕ್ಕು ನೋಡಲು ಯತ್ನಿಸಿದ್ದಾರೆ. ಶತ್ರುಘ್ನನ ಮನೋಗತದ ಮೂಲಕವೇ, ಅವನ ಹಾಗೂ ಸರಯೂ ನದಿಯ ಒಡನಾಟ, ಅಣ್ಣಂದಿರಲ್ಲಿ ಭರತನಿಗೆ ಹೆಚ್ಚು ಅಂಟಿಕೊಂಡ ಪರಿ, ಶೃತಕೀರ್ತಯೊಂದಿಗಿನ ಸರಸ ಸಲ್ಲಾಪಗಳು, ಬಲಿದ ಹಾಗೂ ಲವಣಾಸುರರೊಂದಿಗಿನ ಕದನ, ರಾಮಲಕ್ಷ್ಮಣರು ಹಾಗೂ ಭರತ ಮೂವರೂ ಆಯೋಧ್ಯೆಯನ್ನು ಅನಿವಾರ್ಯ ಕಾರಣಗಳಿಂದ ಬಿಟ್ಟು ಹೋದಾಗ, ತಾನೊಬ್ಬನೇ ಅರಮನೆಗೆ ಗಂಡು ದಿಕ್ಕಾಗಿ, ಇತ್ತ ತಾಯಂದಿರು, ಅತ್ತಿಗೆಯರು, ಮಡದಿ ಎಲ್ಲರನ್ನೂ ಸಂತೈಸುತ್ತಾ, ಅತ್ತ ಶತ್ರುಗಳಿಂದಲೂ ಆಯೋಧ್ಯೆಯನ್ನು ರಕ್ಷಿಸಿಕೊಂಡು, ಪ್ರಜೆಗಳನ್ನೂ ಸೌಖ್ಯದಿಂದ ಪಾಲಿಸಿದ ಬಗೆ, ರಾಮನಾಗಮನ ನಂತರದಲ್ಲಿ ಮಧುಪುರಕ್ಕೆ ಅರಸನಾಗಿ ಆಳಿದ ಪರಿ, ಅಶ್ವಮೇಧಯಾಗದ ಸಂದರ್ಭದಲ್ಲಿ ಯಾಗಾಶ್ವದ ಹಿಂದೆ ಅಲೆದು ಆನೇಕ ರಾಜರುಗಳೊಂದಿಗೆ ಸೆಣಸಿದ ಸಾಹಸದ ಕಥೆಗಳು ಎಲ್ಲವೂ ನಿರೂಪಿತವಾಗಿವೆ. ಪೌರಾಣಿಕ ಕಥೆಯನ್ನು ಆಧರಿಸಿ ಬರೆದರೂ, ಅದನ್ನು ಬೆಳೆಸಲು, ನಿರೂಪಿಸಲು ಕಲ್ಪನಾಶಕ್ತಿಯೂ ಅಗತ್ಯವಾಗಿ ಬೇಕಾಗುತ್ತದೆ. ಅದು ಲೇಖಕರಿಗೆ ಇದೆ. ಭಾಷೆ ಶೈಲಿಗಳು ಚೆನ್ನಾಗಿವೆ. ಸಾಕಷ್ಟು ಅಧ್ಯಯನದ ಹಿನ್ನೆಲೆಯಲ್ಲಿ ಈ ಕೃತಿಯನ್ನು ರಚಿಸಿದ್ದಾರೆ. ಕೇಕೆಯ ರಾಜ್ಯದಿಂದ ಕೋಸಲಕ್ಕೆ ಭರತ ಶತ್ರುಘ್ನರು ಪಯಣಿಸುವ ಸಂದರ್ಭದಲ್ಲಿ ಕಾದಂಬರಿಕಾರರು ಕೊಡುವ ಮಾರ್ಗದ ನಕ್ಷೆಯ ವಿವರಗಳೇ ಇದಕ್ಕೆ ಸಾಕ್ಷಿ! ಇಂತಹ ಕಾದಂಬರಿಯನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಪ್ರದೀಪ್ ಬೇಲೂರು ಅವರು ಅಭಿನಂದನಾರ್ಹರು, ಅವರಿಂದ ಇನ್ನಷ್ಟು ಉತ್ತಮ ಕೃತಿಗಳು ಬರಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ. -ಆಶಾ ರಘು ಕಾದಂಬಗಾರ್ತಿ
ಕೆ.ಟಿ.ಗಟ್ಟಿ
ಎಚ್.ಎನ್. ಯಾದವಾಡ
ಭಾರತೀಯರಾದ ನಮ್ಮ ಪಾಲಿಗೆ ದೇವಾಲಯಗಳು ಜೀವನಮಾರ್ಗಕ್ಕೆ ಅವಶ್ಯಕವಾದ ಶ್ರದ್ಧಾಕೇಂದ್ರಗಳಾಗಿವೆ. ದೇವಾಲಯಗಳು ಸಮಾಜ-ಸಂಸ್ಕೃತಿ ಇತಿಹಾಸ-ಧರ್ಮ ಕ್ಷೇತ್ರಗಳಿಗೆ ಅಪಾರವಾದ ಕೊಡುಗೆಯನ್ನು ನೀಡುತ್ತಾ ನಮ್ಮೊಟ್ಟಿಗೆ ಸಾಗಿ ಬಂದಿವೆ. ಇವುಗಳ ಆಳ-ವೈಶಾಲ್ಯಗಳ ಬಗೆಗೆ ಚಿಂತನ-ಮಂಥನಗಳೂ ನಡೆದುಕೊಂಡು ಬಂದಿವೆ. ಆಲಯಗಳ ಬಗೆಗಿನ ನಮ್ಮ ಶ್ರವಣಾತ್ಮಕ ಅರಿವಿಗಿಂತ ಮಿಗಿಲಾಗಿ ಅವುಗಳನ್ನು ಕಣ್ಣುಂಬ ಕಂಡು ಮಾನಸಿಕ ಸಂತೋಷ-ಸಮಾಧಾನ-ಶಾಂತಿಗಳನ್ನು ಪಡೆಯಬೇಕೆಂದು ನಾವು ಸದಾ ಹಂಬಲಿಸುತ್ತೇವೆ.
Showing 2731 to 2760 of 3313 results