nil
ಎನ್.ಸಿ. ಮಹೇಶ್ರವರ ಮೂರನೆಯ ಕಥಾಸಂಕಲನ ಅಗೆಲು. ಪ್ರಾರಂಭದ ಕಥೆಗಳ ಆಕ್ರೋಶವನ್ನು ಕಳೆದುಕೊಂಡು ಬದುಕನ್ನು ಸಾವಧಾನದಿಂದ ನೋಡುವ ಮನಸ್ಥಿತಿಯನ್ನು ರೂಢಿಸಿಕೊಂಡಿರುವ ಬಗೆ ಈ ಕಥೆಗಳಲ್ಲಿ ನಿಚ್ಚಳವಾಗಿ ಕಾಣಬರುತ್ತದೆ. ಇವರ ಹಲವಾರು ಕತೆಗಳು ಪ್ರಜಾವಾಣಿ, ಬುಕ್ ಬ್ರಹ್ಮ, ಮಯೂರ, ಅಕ್ಷರ ಸಂಗಾತ ಮುಂತಾದ ಕನ್ನಡದ ಪ್ರಮುಖ ಸಾಹಿತ್ಯ ಸ್ಪರ್ಧೆಗಳಲ್ಲಿ ಪುರಸ್ಕಾರಕ್ಕೆ ಪಾತ್ರವಾಗಿರುವಂತದ್ದು. ಇಲ್ಲಿನ ಬಹುಪಾಲು ಕಥೆಗಳು ಪ್ರಸ್ತುತ ಸಂದರ್ಭದ ಹಲವಾರು ವಿಚಾರಗಳಿಗೆ ಮುಖಾಮುಖಿಯಾಗುತ್ತವೆ. ಅದನ್ನು ಲೇಖಕ ಕಂಡಿರಿಸಿರುವ ಕ್ರಮ ಅತ್ಯಂತ ಪ್ರಾಮಾಣಿಕವಾಗಿದೆ. ಶಿಕ್ಷಣ ರಂಗದಲ್ಲಿರುವ ದಂಧೆ, ಒಂದು ವರ್ಗವನ್ನು ಹತ್ತಿಕ್ಕಲಾಗದೆ ತತ್ತರಿಸುತ್ತಿರುವ ಮತ್ತೊಂದು ವರ್ಗದವರ ಹಪಾಹಪಿ, ಸ್ತ್ರೀವಾದ, ದೈವದ ಕುರಿತ ನಂಬಿಕೆ, ಕೋಮುವಾದದ ಸ್ವರೂಪ, ಸಂವಿಧಾನ ಇಂದು ಹಲವರ ಮನಸ್ಸಿನಲ್ಲಿ ಅರಳಿಕೊಳ್ಳುತ್ತಿರುವ ಬಗೆ ಇಲ್ಲಿನ ಕಥೆಗಳ ವಸ್ತುವಾಗಿದೆ. "ವರ್ತಮಾನದಲ್ಲಿನ ಮಾಗುವಿಕೆಯ ಪ್ರಜ್ಞೆ ಕೂಡಾ ಅಂತಿಮವಾದುದಲ್ಲ" ಎಂಬ ಅರಿವಿನ ಎಚ್ಚರದಲ್ಲಿ ಬರೆಯುವ ಮಹೇಶ್ ಕನ್ನಡದ ಭರವಸೆಯ ಕತೆಗಾರ,
NA
#
Showing 61 to 90 of 5110 results