• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ಅರಿವಿನ ದಾರಿ | Arivina daari

ತನ್ನ ಕಛೇರಿಯ ಸಮಯದ ನಂತರವೂ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸಿದ್ಧತೆ ಮಾಡುವ ವೃತ್ತಿ ಯಾವುದಾದರೂ ಇದ್ದರೇ ಅದು ಶಿಕ್ಷಕ ವೃತ್ತಿ ಮಾತ್ರ. ಆ ಕಾರ್ಯತತ್ಪರತೆಯ ಗೌರವ ನಮಗಿರಬೇಕು. ತಮ್ಮ ಸ್ವಂತ ಮಕ್ಕಳೊಡನೆ ಸಮಯ ಕೊಡಲಾಗದಿದ್ದರೂ ವಿದ್ಯಾರ್ಥಿಗಳೆಲ್ಲರನ್ನು ಮಕ್ಕಳಂತೆ ಪ್ರೀತಿಸಿ, ಪೋಷಿಸುವ ನಿಸ್ವಾರ್ಥ ಸೇವೆಯ ಅರಿವು ನಮಗಿರಬೇಕು. ನೂರಾರು ಕಣ್ಣುಗಳ ನಡುವೆ ನೊಂದು ತೇವವಾದ, ಸೋತು ಸೊರಗಿ ಹೋದ, ಆತ್ಮ ವಿಶ್ವಾಸ ಕಳೆದುಕೊಂಡು ಕುಗ್ಗಿ ಕಮರಿದ ಮನಸ್ಸುಗಳನ್ನು ಸದಾ ಹುರಿದುಂಬಿಸಿ, ಗೆಲುವಾಗುವ ದಾರಿ ತೋರಿಸಿ, ಕೈ ಹಿಡಿದು ಮುನ್ನಡೆಸಿ, ಭವ್ಯ ಭವಿಷ್ಯದ ಕನಸನ್ನು ಕಲ್ಪಿಸಿ ಬದುಕು ಬೆಳಗಿಸುವ ದಿವ್ಯ ದೃಷ್ಟಿಯನ್ನು ಸೃಷ್ಟಿಸುವ ಶಿಕ್ಷಕರ ಪಾತ್ರದ ಮಹತ್ವ ನಮಗೆ ತಿಳಿದಿರಬೇಕು. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಇಂತಹ ನಮ್ರತೆ, ಸದ್ಗುಣಗಳ ವಿವೇಕವನ್ನು ಜ್ಞಾನದ ಜೊತೆಗೆ ಕಲಿಸುವ ಮಹಾಗುರುವನ್ನು, ಸದಾ ಪೂಜ್ಯನೀಯ ಸ್ಥಾನದಲ್ಲಿ ನೋಡುವ ಹಾಗೂ ಸದ್ವಿಚಾರವನ್ನು ಕಲಿಸುವ ಜ್ಞಾನ ದೇಗುಲವೆಂಬ ಶಾಲೆಯನ್ನು ಕೈ ಮುಗಿದು ಗೌರವಿಸುವ ಮನವೆಂದೂ ಪ್ರಶ್ನಿಸುವ, ಅಪಮಾನಿಸುವ, ಅಣಕಿಸುವ, ಅಪಹಾಸ್ಯ ಮಾಡುವ ಕುತ್ಸಿತ ಸ್ಥಿತಿಗೆ ರೂಪಾಂತರವಾಗದಿರಲಿ.

₹200   ₹160

ಅಸಂಗತ | Asangata

'ರಾಜೀ'-ನಾಟಕವು ದಾಂಪತ್ಯದಲ್ಲಿ ಇರಬೇಕಾದ ನಿಷ್ಠೆಯನ್ನು ಪ್ರಶ್ನಿಸುವ ನಾಟಕ, ಸಂಭಾಷಣೆಗಳ ಸರಣಿಯಿಂದಲೇ ಗಟ್ಟಿತನವನ್ನು ಕಾಯ್ದುಕೊಂಡು ಬಂದಿದೆ. ರಾಜಿ ನೀಡುವ ಉತ್ತರಗಳು, ಒಟ್ಟು ಅವಳದ್ದಾಗದೆ ಒಟ್ಟು ಇಂತಹ ಸ್ತ್ರೀ ಜಗತ್ತಿನ ಪ್ರಾತಿನಿಧಿಕ ಮಾತಾಗುವಂತೆ ಅಕ್ಷತಾ ಎಚ್ಚರವಹಿಸಿದ್ದಾರೆ. ಇದಂತೂ ಭಾವದೊಂದಿಗೆ ಬುದ್ಧಿಯನ್ನು ಬೆಸೆಯುವ ಅಪೂರ್ವ ಪ್ರತಿಭೆ. 'ರಾಜೀ' ಪ್ರಕೃತಿ-ಪುರುಷ ಇಬ್ಬರನ್ನೂ ಚಿಂತನೆಗೆ ಹಚ್ಚುವ ಆಟ. (ನಾಟಕಕ್ಕೆ ಕನ್ನಡದಲ್ಲಿ 'ಆಟ' ಎನ್ನುತ್ತಾರೆ). ಅಕ್ಷತಾ ಈ 'ಆಟ'ವನ್ನು ಆರೋಗ್ಯಕರ ಮನಸ್ಸಿನಿಂದ ಆಡಿದ್ದಾರೆ. -ಡಾ. ಆನಂದ್ ಗೋಪಾಲ್ ಕತೆಗಾರರು ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕರು, ಮೈಸೂರು

₹100   ₹89

ಕಲ್ಲರಳಿ ಹೂವಾಗಿ | Kallarali Hoovaagi

'ನಮ್ಮ ಬದುಕಿನಲ್ಲಿ ನಾಲ್ಕು ಜನರಿಗೆ ಒಳ್ಳೆಯದು ಮಾಡಬೇಕು, ನಮ್ಮ ಬದುಕು ಹಾಗೆಯೇ ರೂಪುಗೊಳ್ಳಬೇಕು' ಎಂದು ಹಿರಿಯರು ಸದಾ ಹೇಳುವ ಮಾತುಗಳು. ಆದರೆ ದೇವಿಕಾ ನಾಲ್ಕು ಜನರಿಗೆ ಒಳ್ಳೆಯದು ಮಾಡಬೇಕು ಎಂಬ ವಿಚಾರವನ್ನು ಘಂಟಾಘೋಷವಾಗಿ ಹೇಳುತ್ತ ಭಾಷಣವನ್ನೇನೂ ಬಿಗಿಯುವುದಿಲ್ಲ. ಬದಲಿಗೆ ಈ ಆಶಯವು ತಮ್ಮ ಅಂತರಂಗದಲ್ಲಿ ಸದಾ ಹಸಿರಾಗಿರುವಂತೆ ನೋಡಿಕೊಂಡವರು. ಈ ಅರಿವು ತೆಳುವಾಗಿ ನನ್ನ ಮನದಲ್ಲಿ ಮೂಡಿದ್ದರೂ, ಅವರ ಲೇಖನಗಳನ್ನು ಓದುತ್ತ ಹೋದಂತೆ ಅವರ ಅಂತರಂಗದ ಆಶಯವನ್ನು ಓದುವ ಅವಕಾಶವೊ೦ದು ನನಗೆ ದೊರೆತಂತಾಯಿತು.

₹140   ₹125

ಜಗದ ಗೆಳತಿ | Jagada Gelati

ಕಾವ್ಯವು ಕಾಲಕಾಲದ ಅಗತ್ಯಗಳಿಗೆ ತಕ್ಕಂತೆ ತನ್ನ ಪ್ರಸ್ತುತಿಯಲ್ಲಿ ಬದಲಾವಣೆ ಮಾಡಿಕೊಂಡ ಒಂದು ಪ್ರಕಾರವೆನ್ನಬಹುದು. ಕವಿಯ ಕಲ್ಪನಾ ಯಾನದ ಅಭಿವ್ಯಕ್ತಿಯಾಗಿ ಮೂಡಿ ಬಂದ ಭಾವಗೀತೆಗಳ ಪರಂಪರೆಯನ್ನು ಹಾದು ನವ ಕವನಗಳು ವರ್ತಮಾನದ ಅನುಭೂತಿಯನ್ನು ದಕ್ಕಿಸಿಕೊಂಡರೂ ಇಂದಿಗೂ ಭಾವ ಗೀತೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡಿಲ್ಲ ತನ್ನ ಇರುವಿಕೆಗೆ ಭಾವ, ಲಯ, ಪ್ರಾಸವನ್ನು ಬಯಸುವ ಈ ಕವಿತೆಗಳು ಅದರ ಚೆಲುವು ಮತ್ತು ಗೇಯತೆಯ ಗುಣಗಳಿಂದಾಗಿ ಜನ ಸಾಮಾನ್ಯರನ್ನೂ ಒಲಿಸಿಕೊಳ್ಳುತ್ತದೆ. ಇಂತಹ ಗೇಯತೆಗೆ ಒಗ್ಗಿಕೊಳ್ಳುವ ಕವಿತೆಗಳಿಂದಾಗಿಯೇ ರೂಪಕಲಾ ಆಳರ 'ಜಗದ ಗೆಳತಿ' ಸಂಕಲನದ ಬಹಳಷ್ಟು ಕವಿತೆಗಳು ಈಗಾಗಲೇ ಜನಮನವನ್ನು ಗೆದ್ದುಕೊಂಡಿದೆ. ಅದು ಬರಿಯ ಭಾವ ಲಹರಿಯಾಗಿರದೆ ಬೇರೆ ಬೇರೆ ಸಂದರ್ಭಗಳಲ್ಲಿ ಹಾಡಬಹುದಾದ ಅಭಿನಂದನಾ ಗೀತೆಗಳು, ಸಾಂದರ್ಭಿಕ ಕವಿತೆಗಳು, ಆಶಯ ಗೀತೆಗಳಿಂದಾಗಿಯೂ ಬಹುಮುಖಿಯಾಗಿ ಸಮೃದ್ಧವಾಗಿದೆ. ಬೇರೆ ಬೇರೆ ಸಂಸ್ಥೆಗಳ ಉತ್ಸವಗಳಿಗೆಂದೇ ಬರೆದ ಹಾಡುಗಳೂ ಇವೆ. ಬಹಳಷ್ಟು ಕವನಗಳಲ್ಲಿ ಶುಭಹಾರೈಕೆಗಳು, ಹರಕೆಗಳು, ಮನೆಯ ಚಾವಡಿಯೊಳಗಿನ ಅನುನಯದ ಆಶೋತ್ತರಗಳು ಬಯಲಾಗಿವೆ. ಹುಟ್ಟು ಹಬ್ಬದ ದಿನ ಕನ್ನಡದಲ್ಲಿಯೇ ಶುಭ ಹಾರೈಸಬಹುದಾದ ಎರಡೆರಡು ಹಾಡುಗಳು 'ಹುಟ್ಟು ಹಬ್ಬಕ್ಕೆ ಹಾರೈಕೆ' ಮತ್ತು 'ಜನುಮ ದಿನದ ಹಾರೈಕೆ'ಯಾಗಿ ಮೂಡಿಬಂದಿದೆ. 'ಗೆದ್ದು ಬಾರೋ ವೀರ', 'ಎದ್ದೇಳು ಕನ್ನಡಿಗ', 'ಕನ್ನಡ ಮರ', 'ಹಣತೆ ಹಳ್ಳೋಣ ಬನ್ನಿ', 'ಜಗದ ಗೆಳತಿ, 'ಅಮ್ಮ ನೆನಪಾಗುತ್ತಾಳೆ', ಮುಂತಾದ ಕವನಗಳು ಆಯಾ ಸಂದರ್ಭದಲ್ಲಿ ಹಾಡಬಹುದಾದ ಕವಿತೆಗಳು, ಅವುಗಳನ್ನು ಬರಿಯ ಪುಸ್ತಕದೊಳಗಿನ ಅಕ್ಷರಗಳಾಗಿರಲು ಬಿಡದೆ ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಎದೆಯ ಭಾವನೆಗಳನ್ನು ಹೃದಗೊಳಿಸುವ ಹಾದಿಯಲ್ಲಿ ಗೇಯಗೀತೆಗಳು ಬಯಸುವ ಪ್ರಾಸ ಲಯಗಳನ್ನು ಅರ್ಥಕ್ಕೆ ಚ್ಯುತಿ ಬರದಂತೆ ಹೊಂದಿಸಿಕೊಳ್ಳುವಲ್ಲಿ ಅವರ ಶ್ರಮ ಸಾರ್ಥಕವಾಗಬಹುದು.

₹130   ₹116

ನಗುವ ನಯನ ಮಧುರ ಮೌನ | Naguva Nayana Madhura Mouna

ಪ್ರಸ್ತುತ ಜಮಾನದಲ್ಲಿ ನಿಸ್ವಾರ್ಥ ಮನಸ್ಸಿನ ಯುವ ಪೀಳಿಗೆ ಕಾಣಸಿಗುವುದು ಅಪರೂಪ. ಎಲ್ಲೋ ನೋಡಿದ ಕೇಳಿದ ಆದರ್ಶಗಳನ್ನು ಪಾಲಿಸಿಕೊಂಡು ಬಂದಿರುವ ವ್ಯಕ್ತಿಯ ಚಿತ್ರಣ ನನ್ನ ಮನಸ್ಸಿನಲ್ಲಿ ಮೂಡಿತ್ತು. ಅದೇ ವ್ಯಕ್ತಿತ್ವವನ್ನು ಈ ಕಾದಂಬರಿಯಲ್ಲಿ ಒಂದು ಪಾತ್ರವನ್ನಾಗಿಸಿದೆ. ಅಂತಹ ಯುವಕನ ‘ಜೊತೆಯಾಗಿ ಬೆಳೆಯೋಣ’ ಎನ್ನುವ ಧ್ಯೇಯ ನನ್ನನ್ನು ಬಹಳವಾಗಿ ಕಾಡಿತ್ತು. ಇನ್ನೂ ಅಂತಹ ಆದರ್ಶ ಧ್ಯೇಯಗಳನ್ನು ಹೊತ್ತ ಯುವಕರು ನಮ್ಮ ನಡುವೆ ಇದ್ದಾರೆ ಎನ್ನುವ ಅಚ್ಚರಿಯಿಂದ ಈ ಕಾದಂಬರಿಯನ್ನು ಬರೆದೆ. ಈ ರೀತಿಯ ಯುವ ಪೀಳಿಗೆ ಇನ್ನಷ್ಟು ಬೆಳೆದರೆ ಗಾಂಧೀಜಿ ಯವರು ಕಂಡ ರಾಮರಾಜ್ಯದ ಕನಸು ನನಸಾದೀತು. ತನ್ನ ಗುರಿ ತಲುಪಿದ ಮೇಲೆಯೇ ಬಾಕಿ ವಿಚಾರಗಳೆಂದು ಸಂಯಮದಿAದ ವರ್ತಿಸಿ ತನ್ನ ಪ್ರೀತಿಯಲ್ಲಿಯೂ ಆದರ್ಶವನ್ನು ಮೆರೆದ ಆರ್ಯನ್‌ನ ಪಾತ್ರ, ಎಂದೂ ಎಲ್ಲೆ ಮೀರದ ಚಿಗುರುವಿನಂತಹ ಪಾತ್ರ ಓದುಗರಿಗೆ ಮುದ ನೀಡದಿರಲಾರದು.

₹300   ₹240

ಯಾತ್ರೆ | Yaatre

ಭಾರತದ ವಿವಿಧ ನೆಲೆಗಳನ್ನು ದಾಟಿದ ವ್ಯಕ್ತಿಯ ಕಾಲ್ಪನಿಕ ಪ್ರಯಾಣವನ್ನು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಯಾಮಗಳಲ್ಲಿ ತೋರುವ ರೋಮಾಂಚಕ ಸಂಕಲನ. ಈ ಲೇಖನಗಳಲ್ಲಿ, ಲೇಖಕರು ಭೇಟಿಯಾದ ಜನರ ನವಜೀವನ, ಹಳೆಯ ರಿವಾಜುಗಳು, ವೈಶಿಷ್ಟ್ಯಪೂರ್ಣ ಸಂಸ್ಕೃತಿ ಮತ್ತು ಪ್ರಾಚೀನ ಪರಂಪರಿಗಳನ್ನು ಹಂಚಿಕೊಂಡಿದ್ದಾರೆ.ಕೊಡಗಿನ ಆನೆಗಳ ವರ್ತನೆ ಕುರಿತು ಬರೆದ ಲೇಖನವು ಯಾತ್ರೆಯನ್ನು ಅಪೂರ್ವವಾದ ಸೌಂದರ್ಯದಿಂದ ಕೂಡಿಸಿದೆ. ಅತ್ಯಂತ ಸರಳ- ಲಾಲಿತ್ಯಪೂರ್ಣ ಬರವಣಿಗೆಯನ್ನು ಹೊಂದಿರುವ ಕೃತಿ 'ಯಾತ್ರೆ '

₹210   ₹187