| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಡಾ. ಮೇಘನ ಜಿ. | Dr. Meghana G |
| Publisher: | ಕದಂಬ ಪ್ರಕಾಶನ | Kadamba Prakashana |
| Language: | Kannada |
| Number of pages : | 200 |
| Publication Year: | 2026 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಪ್ರಾಚೀನ ಕರ್ನಾಟಕದಲ್ಲಿ ಎಣ್ಣೆಗಾಣಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದವು. ಪ್ರಭುತ್ವಕ್ಕೆ ಹೆಚ್ಚು ತೆರಿಗೆಯನ್ನು ನೀಡುತ್ತಿದ್ದ ಉದ್ಯಮವಿದು. ಮತ್ತು ಪ್ರತಿಯೊಬ್ಬರಿಗೂ ಅಗತ್ಯವಿದ್ದ ತೈಲವನ್ನು ಉತ್ಪತ್ತಿ ಮತ್ತು ಸರಬರಾಜು ಮಾಡುವ ಮೂಲಕ ದೊಡ್ಡ ಹಣಕಾಸಿನ ವಿನಿಮಯದ ಔದ್ಯೋಗಿಕ ಕ್ಷೇತ್ರವಾಗಿತ್ತು. ಈ ಉದ್ಯಮದಾರರನ್ನು ತೆಲ್ಲಿಗರು ಅಥವಾ ಗಾಣಿಗರು ಎಂಬ ಸಮುದಾಯವನ್ನೇ ಹುಟ್ಟುಹಾಕಿತ್ತು. ಪ್ರಾಚೀನ ಕುಲಕಸುಬುಗಳಲ್ಲಿ ಬಹಳ ಪ್ರಮುಖವಾದ ಈ ಕಸುಬುದಾರರು ಸಮಾಜದಲ್ಲಿ ದಾನ ಧರ್ಮಗಳನ್ನು ಮಾಡುವಷ್ಟು ಶ್ರೀಮಂತವಾಗಿತ್ತು. ಧಾರ್ಮಿಕ ಆಚರಣೆಗಳಿಗೆ, ದೇವಾಲಯದ ಸೇವೆಗಳಲ್ಲಿ ತೈಲವು ಬಹಳ ಪ್ರಧಾನವಾದ ಪಾತ್ರವಹಿಸುತ್ತಿತ್ತು. ದೇವಾಲಯಗಳ ನಿತ್ಯ ನಿರ್ವಹಣೆಗೆ ಎಣ್ಣೆ ಅತ್ಯಗತ್ಯವಾದ ವಸ್ತುವಾಗಿತ್ತು. ಇದಕ್ಕೆ ದೇವಾಲಯಗಳ ದೀಪಗಳ, ಆಚರಣೆಗಳ ಸೇವೆಗಾಗಿ ಎಣ್ಣೆಗಾಣಗಳನ್ನೇ ಹಾಗೂ ಅವುಗಳಿಗೆ ವಿಧಿಸುತ್ತಿದ್ದ ತೆರಿಗೆಗಳನ್ನೇ ಉಡುಗೊರೆಯಾಗಿ ನೀಡುತ್ತಿದ್ದ ನೂರಾರು ಉದಾಹರಣೆಗಳು ಶಾಸನಗಳಲ್ಲಿದೆ.
ಎಳ್ಳೆಣ್ಣೆ, ಹೊಂಗಎಣ್ಣೆ, ಹಿಪ್ಪೆಎಣ್ಣೆ, ಕಡಲೆ ಎಣ್ಣೆ, ಸಾಸಿವೆಎಣ್ಣೆ, ಕುಸುಬೆಎಣ್ಣೆ, ಹತ್ತಿಎಣ್ಣೆ, ಬೇವಿನೆಣ್ಣೆ ಮುಂತಾದ ಎಣ್ಣೆಗಳು ಬಳಕೆಯಲ್ಲಿದ್ದು ಇಂತಹ ನಿತ್ಯ ಬಳಕೆಯ ವಸ್ತುವಾದ ಎಣ್ಣೆಯನ್ನು ಉತ್ಪತ್ತಿಮಾಡುವ ಸಮುದಾಯ ಪ್ರಬಲವಾದ ಸಮುದಾಯವಾಗಿತ್ತು. ಇಂತಹ ಗಾಣಗಳನ್ನು ಕುರಿತು ಡಾ. ಮೇಘನ ಜಿ. ಅವರು ನಡೆಸಿರುವ ಗಂಭೀರ ಅಧ್ಯಯನವೇ ಪ್ರಸ್ತುತ "ಎಣ್ಣೆ ಗಾಣಗಳು: ಪ್ರಕರಣ ಅಧ್ಯಯನ" ಎಂಬ ಈ ಕೃತಿಯಾಗಿದೆ. ಸಾಹಿತ್ಯ, ಶಾಸನಗಳು, ಜಾನಪದ ಸಾಹಿತ್ಯ ಹೀಗೆ ನಾನಾ ಆಕರಗಳನ್ನು ಬಳಸಿ. ಇಲ್ಲಿ ಅಧ್ಯಯನ ನಡೆಸಿರುವುದು ಈ ಕೃತಿಯ ತೂಕವನ್ನು ಹೆಚ್ಚಿಸಿದೆ. ಸಂಶೋಧಕರಾದ ಡಾ. ಮೇಘನ ಜಿ. ಅವರಿಂದ ಇಂತಹ ಇನ್ನೂ ಹಲವಾರು ಕೃತಿಗಳು ಹೊರಬರಲಿ ಎಂದು ಆಶಿಸುತ್ತೇನೆ.
ಪ್ರೊ.ಡಿ.ವಿ.ಪರಮಶಿವಮೂರ್ತಿ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ಡಾ. ಮೇಘನ ಜಿ. | Dr. Meghana G |
0 average based on 0 reviews.