| Category: | ಕನ್ನಡ |
| Sub Category: | ಸಂಶೋಧನಾ ಕೃತಿ |
| Author: | ಡಾ. ಸಂತೋಷ ಹಾನಗಲ್ಲ | Dr Santosha Hangal |
| Publisher: | ಕನ್ನಡ ಅಭಿವೃದ್ಧಿ ಪ್ರಾಧಿಕಾರ | Kannada Abhivruddi Pradhikaara |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
1990ರ ಆನಂತರ ತೀವ್ರವಾಗಿ ಕಾಣಿಸಿಕೊಂಡ ಮಾರುಕಟ್ಟೆ ಕೇಂದ್ರಿತವಾದ ಜಾಗತೀಕರಣವು ರಾಷ್ಟ್ರಗಳು, ವ್ಯವಹಾರಗಳು ಮತ್ತು ವ್ಯಕ್ತಿಗಳು ಸಂಪರ್ಕ ಸಾಧಿಸುವ ವಿಧಾನಗಳನ್ನು ಸಂಪೂರ್ಣವಾಗಿ ಪರಿವರ್ತಿಸಿ, ಸ್ಥಳೀಯ ಭಾಷೆಗಳನ್ನು ಮೂಲೆಗೆ ತಳ್ಳಿದೆ. ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಬೆಳೆದಿದೆ. ಇಂಥ ಸಂದರ್ಭದಲ್ಲಿ ಸ್ಥಳೀಯ ಭಾಷೆಗಳನ್ನು ಉಳಿಸಲು ಯೂನೆಸ್ಕೋವೂ ಸೇರಿದಂತೆ ವಿಶ್ವದ ಅನೇಕ ಸಂಸ್ಥೆಗಳು ಸಂಶೋಧನಾತ್ಮಕ ವರದಿಗಳನ್ನು ಪ್ರಕಟಿಸುತ್ತಿವೆ. ಇವುಗಳಿಗೆ ಪೂರಕವಾಗಿ ಇವತ್ತು ನಾವು ನಮ್ಮ ಸಂವಿಧಾನವು ಭಾರತೀಯ ಭಾಷೆಗಳ ಬಗ್ಗೆ ಏನು ಹೇಳಿದೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.
ಭಾಷೆಗಳ ಕುರಿತಂತೆ, ನಾವೆಲ್ಲ ಯಾವ ಸೂತ್ರಗಳಿಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ ಎಂಬ ಅರಿವು ನಮಗೆಲ್ಲರಿಗೂ ಇರಬೇಕು. ಈ ಕಾರಣಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಡಾ. ಸಂತೋಷ ಹಾನಗಲ್ಲ ಅವರು ಬರೆದ 'ಸಂವಿಧಾನ ನುಡಿ ಸಂಹಿತೆ' ಪುಸ್ತಕವನ್ನು ಪ್ರಕಟಿಸುತ್ತಿದೆ. ಈ ಕೃತಿಯಲ್ಲಿ ಒಟ್ಟು ಒಂಬತ್ತು ಅಧ್ಯಾಯಗಳಿದ್ದು, ಅವುಗಳಲ್ಲಿ ಭಾಷೆಗಳ ಕುರಿತು ಸಂವಿಧಾನ ಸಭೆಗಳಲ್ಲಿ ನಡೆದ ಚರ್ಚೆಗಳು, ಅಧಿಕೃತ ಭಾಷೆಗಳ ಆಯ್ಕೆ, ಭಾಷಾ ಆಯೋಗದ ಮಹತ್ವ, 1956ರ ರಾಜ್ಯಗಳ ಪುನರ್ ವಿಂಗಡಣಾ ಕಾಯ್ದೆ ಮತ್ತು ಭಾಷೆಗಳ ಕುರಿತು ಕೇಂದ್ರದ ಹಾಗೂ ರಾಜ್ಯದ ಅಧಿನಿಯಮಗಳ ಕುರಿತಾದ ಮಹತ್ವದ ಮಾಹಿತಿಗಳಿವೆ. ಪುಸ್ತಕದ ಕೊನೆಯಲ್ಲಿ ಕರ್ನಾಟಕ ಸರಕಾರ ಜಾರಿಗೆ ತಂದಿರುವ ಅಧಿನಿಯಮಗಳನ್ನೂ ಕೊಡಲಾಗಿದೆ.
ಇಂಥದ್ದೊಂದು ಉಪಯುಕ್ತವಾದ ಪುಸ್ತಕ ರಚಿಸಿದ ಡಾ. ಸಂತೋಷ ಹಾನಗಲ್ಲ ಅವರಿಗೆ ಅಭಿನಂದನೆಗಳು.
ಪುರುಷೋತ್ತಮ ಬಿಳಿಮಲೆ
ಅಧ್ಯಕ್ಷ
ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಡಾ. ಸಂತೋಷ ಹಾನಗಲ್ಲ | Dr Santosha Hangal |
0 average based on 0 reviews.