| Category: | ಕನ್ನಡ |
| Sub Category: | ಕಾದಂಬರಿ |
| Author: | ಮಹಾದೇವ ಹಡಪದ | mahadeva Hadapada |
| Publisher: | ಅವ್ವ ಪುಸ್ತಕಾಲಯ | Avva Pustakalaya |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | 9789359 163376 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಅನಾದಿಕಾಲದ ಪ್ರೇಮವೊಂದು ವಿಧಿಯಾಟಕ್ಕೆ ಬಲಿಯಾಗಿ ಸೆರೆಯಾಗಿ ಕಲ್ಲಾಗಿ ಕಲ್ಲಿಗೆ ತಾಗಿ ಆಕಾರವಾಗಿ ಕಪ್ಪಡಿ ಸಂಗಮದಲ್ಲಿ ಶರಣ ಸಾಂಗತ್ಯಕ್ಕೆ ತೂಗಿ ವೈರಾಗ್ಯದಲ್ಲಿ ಮುಳುಗಿ ಮೌನವಾಗಿ ಬದುಕಿನ ಒರಟು ಕಲ್ಲಿನಲ್ಲಿ ಅರಿವಿನ ಅಪ್ರತಿಮ ಶಿಲ್ಪವನ್ನು ಕೆತ್ತುವ ಮಹಾ ತಾತ್ವಿಕ ಪಯಣವೇ ಈ ಕಾದಂಬರಿ.
"ಮಾತು ಕೂಡ ಎಂಜಲು ಈ ಶಬ್ದಗಳ ಬೆನ್ನುಬೀಳದೆ ಮೌನದ ಗುಹೆಯೊಳಗೆ ಹೊಕ್ಕು ಕೂರಬೇಕಿದೆ" ಎನ್ನುವ ಸಿದ್ಧಸಾಧುವಿನ ವಾಣಿಯಂತೆ, ಇಲ್ಲಿ ಮಾತಿಗಿಂತ ಮೌನವೇ ಪರಮ ಸಂವಹನ. ವನವಾಸದ ನಂತರ ಗಂಡ-ಹೆಂಡತಿ ಮುಖಾಮುಖಿಯಾದಾಗ ಅಲ್ಲಿ ಶಬ್ದಗಳ ಅಬ್ಬರವಿಲ್ಲ, ಬದಲಿಗೆ ಮೌನದ ಮಡುವು ಕಟ್ಟೆಯೊಡೆದು ಕಣ್ಣೀರಾಗಿ ಹರಿಯುತ್ತದೆ.
ಖ್ಯಾತ ನಟ, ಸಾಹಿತಿ, ರಂಗಕರ್ಮಿ ಹಾಗೂ ಸಿನಿಮಾ ನಿರ್ದೇಶಕರಾದ ಮಹಾದೇವ ಹಡಪದ ಅವರು ಉತ್ತರ ಕರ್ನಾಟಕದ ಮಣ್ಣಿನ ಘಮಲಿನೊಂದಿಗೆ, ಸೃಷ್ಟಿ-ಸ್ಥಿತಿ-ಲಯದ ರಹಸ್ಯಗಳನ್ನು ಮತ್ತು ಜೀವದ ಅಂತರಂಗದ ವಿಕಾಸವನ್ನು ರಂಗಭೂಮಿಯ ದೃಶ್ಯಕಾವ್ಯದಂತೆ ಇಲ್ಲಿ ಅನಾವರಣಗೊಳಿಸಿದ್ದಾರೆ. ಲೌಕಿಕದ ಕತ್ತಲೆಯಿಂದ ಅಲೌಕಿಕದ ಮೌನಕ್ಕೆ ಸಾಗುವ ಈ ಅನ್ವೇಷಣೆಯ ಮಹಾಕಾವ್ಯ, ಪ್ರತಿಯೊಬ್ಬ ಓದುಗನ ಅಂತರಂಗವನ್ನು ಪ್ರಬಲವಾಗಿ ಕಾಡುತ್ತದೆ.
ನಂದಕುಮಾರ್ ಜಿ.ಕೆ. ನಟ, ಕತೆಗಾರ, ರಂಗಕರ್ಮಿ
ಮಹಾದೇವ ಹಡಪದ | mahadeva Hadapada |
0 average based on 0 reviews.