| Category: | ಕನ್ನಡ |
| Sub Category: | ಕಾದಂಬರಿ |
| Author: | ಎಸ್ ಡಿ ಕುಮಾರ್ | S D Kumar |
| Publisher: | ಅವ್ವ ಪುಸ್ತಕಾಲಯ | Avva Pustakalaya |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | 9789350158732 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
"ಬದುಕಿನ ದಡದ ಮೇಲೆ ಚಪ್ಪಲಿ, ಒಂದು ಪತ್ರ ಮತ್ತು ಡೈರಿಯನ್ನಿಟ್ಟು... ಹಾಗೇ ಹೆಜ್ಜೆ ಸರಿಸುತ್ತಾ ನೀರೊಳಗೆ ಮೌನವಾಗಿ ಕರಗಿಹೋದ ಕವಿ."
ತೆಲುಗು ಸಾಹಿತ್ಯ ಲೋಕ ಕಂಡ ಅತ್ಯಂತ ಸೃಜನಶೀಲ ಹಾಗೂ ಅಪ್ರತಿಮ ಕವಿ ಚಿತ್ರಕೊಂಡ ಗಂಗಾಧರ್. ಅವರು ಬದುಕಿದ್ದು ಕೇವಲ 37 ವರ್ಷಗಳ ಅಲ್ಪಾವಧಿಯನ್ನೇ ಆದರೂ, ಆ ಬದುಕಿನ ಕೊನೆಯ ಒಂದು ದಶಕದಲ್ಲಿ ಅವರು ನಡೆಸಿದ ಸಾಹಿತ್ಯದ ಸತತ ಮತ್ತು ತೀವ್ರ ಆರಾಧನೆ ಅನನ್ಯವಾದದ್ದು. ಗಂಗಾಧರ್ ಕೇವಲ ಕವಿಯಾಗಿರಲಿಲ್ಲ, ಬದುಕಿನ ನಿಗೂಢತೆಗಳನ್ನು ಹುಡುಕುತ್ತಾ ಹೊರಟ ಒಬ್ಬ ಸಂಚಾರಿ ಕವಿ. ಅವರ ನೂರಾರು ಕವನಗಳು, ಸಣ್ಣ ಕಥೆಗಳು ಹಾಗೂ ಕಾದಂಬರಿಗಳಲ್ಲಿ ಕಾಣಸಿಗುವುದು ಸಾಮಾನ್ಯ ಲೋಕದ ಸದ್ದು-ಗದ್ದಲಗಳಲ್ಲ; ಬದಲಿಗೆ ಏಕಾಂತಲೋಕದ ಸ್ವಗತಗಳು ಮತ್ತು ಮೃತ್ಯುಕಾಂಕ್ಷೆಯ ನೆರಳಿನಂತಿರುವ ತೀವ್ರವಾದ ಭಾವನೆಗಳು. ಸರಿಯಲಿಜಂ (Surrealism) ಮತ್ತು ಮ್ಯಾಜಿಕ್ ರಿಯಲಿಜಂ (Magic Realism) ಶೈಲಿಗಳನ್ನು ಅದ್ಭುತವಾಗಿ ಮೇಲೈಸಿದ ಅವರ 'ದಿ ಡೆಡ್ ಸಿಟಿ' (The Dead City) ಕೃತಿಯು ಇಂದಿಗೂ ಓದುಗರಲ್ಲಿ ತೀವ್ರ ಕುತೂಹಲ ಮೂಡಿಸುತ್ತಾ, ಸಾಹಿತ್ಯ ವಲಯದಲ್ಲಿ ಅನೇಕ ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿರುವ ಒಂದು ಅಪರೂಪದ ಅಬ್ಬರ್ಡ್ (Absurd) ಸೃಷ್ಟಿಯಾಗಿದೆ.
ತಮ್ಮ ಊರಿನ ಕೆರೆಯ ದಂಡೆಯ ಮೇಲೆ ಕೃತಿಗಳನ್ನಷ್ಟೇ ಅಲ್ಲ, ಇಡೀ ಬದುಕನ್ನೇ ಬಿಟ್ಟು ಜಲಸಮಾಧಿಯಾದ ಗಂಗಾಧರ್, ತೆಲುಗು ಸಾಹಿತ್ಯದ ಎಂದೂ ಮಾಸದ ನಿಗೂಢ ಕಾವ್ಯದಂತಿದ್ದಾರೆ.
ಎಸ್ ಡಿ ಕುಮಾರ್ | S D Kumar |
0 average based on 0 reviews.