| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | Arjun Devaladakere |
| Publisher: | ದೇವಾಲದಕೆರೆ ಪ್ರಕಾಶನ | Devaladakere Prakashana |
| Language: | Kannada |
| Number of pages : | |
| Publication Year: | 2026 |
| Weight | 200 |
| ISBN | 9789356793859 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
“ಈಗ ಹೋದಳಲ್ಲ ಹುಡುಗಿ, ಯಾರವಳು...!?” ಹರಿನಾಥರ ಬಳಿ ಬಂದ ಕೂಡಲೇ ಕೇಳಿದ್ದರು ರುದ್ರದೇವ.
“ಅವಳಾ...? ಕಾವ್ಯ ಅಂತ. ಒಳ್ಳೆ ಹುಡುಗಿ. ನಮ್ಮ ದಾನಪ್ಪ ರೆಡ್ಡಿ ಮಗಳು. ಯಾಕೆ ಏನಾಯ್ತು...?” ಎಂದಿದ್ದರು ಹರಿನಾಥ, ಅರೆಕ್ಷಣ ಏನನ್ನೋ ಯೋಚಿಸುತ್ತ ನಿಂತ ರುದ್ರದೇವ,
“ಆ ಹುಡುಗಿಯ ಮೇಲೆ ವಾಮಾಚಾರ ಪ್ರಯೋಗವಾಗಿದೆ!” ಎಂದಿದ್ದರು ತಣ್ಣನೆ. ನಗು ಮುಖವನ್ನಿಟ್ಟುಕೊಂಡು, ತೀರ್ಥದ ಬಟ್ಟಲಿನ ತುಳಸಿ ಎಲೆಯನ್ನ ಕೈಗೆತ್ತಿಕೊಳ್ಳುತ್ತಿದ್ದ ಹರಿನಾಥರು ಬೆಚ್ಚಿಬಿದ್ದು “ಏನ್ ಹೇಳ್ತಿದ್ದೀರಾ...!?” ಕೇಳಿಸಿಕೊಂಡದ್ದೇ ಸುಳ್ಳೇನೋ ಎನ್ನುವಂತೆ ಕೇಳಿದ್ದರು. ಯೋಚನೆಯ ಸುಳಿಯಲ್ಲೇ ಇದ್ದ ರುದ್ರದೇವ ಮತ್ತೊಂದು ಕ್ಷಣ ತಡೆದು "ಅವಳ ಮೇಲೆ ಮಾರಣ ವಿದ್ಯೆಯ ಪ್ರಯೋಗವಾಗಿದೆ. ಅವಳಿನ್ನು ಹೆಚ್ಚುದಿನ ಬದುಕುವುದಿಲ್ಲ. ಬಾಗಿಲು ದಾಟುವಾಗ ಅವಳ ಮುಖ ನೋಡಿದೆ. ಅಲ್ಲಿ ಸಾವು ಬೆನ್ನತ್ತಿ ಕುಳಿತಿರುವಾಗ ಕಾಣುವ ವಿಲಕ್ಷಣ ಕಳೆಯೊಂದಿತ್ತು. ಕಣ್ಣಲ್ಲಿ ವಾಮಾಚಾರಕ್ಕೆ ಒಳಗಾದ ಸೂಚನೆಯಿತ್ತು. ಅವಳು ಬದುಕುವುದಿಲ್ಲ...” ಎಂದಿದ್ದರು ನಿಧಾನವಾಗಿ ಕಣ್ಮುಂದೆ ಆಡಿ ಬೆಳೆದ ಹುಡುಗಿಯೊಬ್ಬಳ ಸಾವನ್ನ ಕಲ್ಪಿಸಿಕೊಳ್ಳಲೂ ಭಯವಾಗಿ, "ಏನಾಗಿದೆ ಸ್ವಲ್ಪ ಬಿಡಿಸಿ ಹೇಳ್ತಿರಾ ...?” ಎಂದಿದ್ದರು ಹರಿನಾಥ.
ತೋರ್ಬೆರಳಲ್ಲಿ ಪುಟ ತೆರೆದು ನೋಡಿ ... ಸಾವಿನ ಇನ್ನಷ್ಟು ಬಿಕ್ಕಳಿಕೆಗಳಿವೆ ಒಳಗೆ.
-ಅರ್ಜುನ್ ದೇವಾಲದಕೆರೆ
Arjun Devaladakere |
0 average based on 0 reviews.